ಮಡಿಕೇರಿ, ನ. ೫: ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯ ಸಭೆಯು ಜಿಲ್ಲಾ ಸಮಿತಿ ಅಧ್ಯಕ್ಷ ಎಸ್.ಎಂ.ಚAಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಕಾಫಿ ಕೃಪಾ ಕಟ್ಟಡದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘದ ೨೦೧೮-೧೯ನೇ ಸಾಲಿನ ಮಹಾಸಭೆಯನ್ನು ತಾ. ೩೦ ರಂದು ಮಡಿಕೇರಿಯ ಬಾಲಭವನ ಸಭಾಂಗಣದಲ್ಲಿ ನಡೆಸಲಾಗುವದು. ಅಂದು ೨೦೧೮-೧೯ ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದು ಚಂಗಪ್ಪ ತಿಳಿಸಿದರು.
ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿಯ ನಕಲು ಪ್ರತಿಯೊಂದಿಗೆ ಅರ್ಜಿಯನ್ನು ಅಧ್ಯಕ್ಷರು, ಕಾರ್ಯದರ್ಶಿ ಕೊಡಗು ಜಿಲ್ಲಾ ಒಕ್ಕಲಿಗರ ಸಂಘ, ನಂಜುAಡೇಶ್ವರ ಕೃಪಾ, ದಾಸವಾಳ ರಸ್ತೆ, ಮಡಿಕೇರಿ, ಈ ವಿಳಾಸಕ್ಕೆ ನ.೨೦ ರ ಒಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಎಸ್.ಎಂ. ಚಂಗಪ್ಪ (ಅಧ್ಯಕ್ಷರು), ೮೭೬೨೩೪೫೫೭೭ ಉಮೇಶ್ ಕುಮಾರ್ (ಗೌರವ ಕಾರ್ಯದರ್ಶಿ) : ೯೪೪೮೯೭೬೪೦೬ ಸಂಪರ್ಕಿಸಬಹುದಾಗಿದೆ.
ಪ್ರಧಾನ ಪೋಷಕರ ನೇಮಕ
ಸಂಘದ ಆಡಳಿತ ಮಂಡಳಿಗೆ ಗೋಣಿಕೊಪ್ಪದ ಬೆಳೆಗಾರ ಡಿ.ಎ. ಸುಬ್ರಮಣಿ ಅವರನ್ನು ಮಹಾ ಪ್ರಧಾನ ಪೋಷಕರನ್ನಾಗಿ ಆಯ್ಕೆ ಮಾಡಲಾ ಯಿತು. ಸೋಮವಾರಪೇಟೆಯ ಪಿ.ಕೆ.ರವಿ, ಮಡಿಕೇರಿಯ ಮೋಹನ್ ಕುಮಾರ್, ವಿ.ಜೆ. ಚಂದ್ರಶೇಖರ್ ಹಾಗೂ ಕೊಡ್ಲಿಪೇಟೆಯ ಚಂದ್ರಶೇಖರ್ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಕ ಮಾಡಿ ಕೊಳ್ಳುವದು, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ಒಕ್ಕಲಿಗ ಸಂಘದ ಯುವ ವೇದಿಕೆಯ ಅಧ್ಯಕ್ಷರನ್ನು ಮುಂದಿನ ಮಹಾಸಭೆಗೆ ಆಹ್ವಾನಿಸಲು ಸಭೆ ನಿರ್ಣಯ ಕೈಗೊಂಡಿತು.
ಕೃಷಿಕರಿಗೆ ಹಾಗೂ ಸಣ್ಣ ಉದ್ಯಮಿಗಳನ್ನು ಸಂಕಷ್ಟಕ್ಕೆ ಸಿಲುಕಿಸಬಹುದಾದ ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಹಾಗೂ ಕೊಡ್ಲಿಪೇಟೆಯ ಚಂದ್ರಶೇಖರ್ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಕ ಮಾಡಿ ಕೊಳ್ಳುವದು, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ಒಕ್ಕಲಿಗ ಸಂಘದ ಯುವ ವೇದಿಕೆಯ ಅಧ್ಯಕ್ಷರನ್ನು ಮುಂದಿನ ಮಹಾಸಭೆಗೆ ಆಹ್ವಾನಿಸಲು ಸಭೆ ನಿರ್ಣಯ ಕೈಗೊಂಡಿತು.
ಕೃಷಿಕರಿಗೆ ಹಾಗೂ ಸಣ್ಣ ಉದ್ಯಮಿಗಳನ್ನು ಸಂಕಷ್ಟಕ್ಕೆ ಸಿಲುಕಿಸಬಹುದಾದ ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ
ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ನಿರ್ಣಯಕ್ಕೆ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿತು.
ಸಂಘದ ಪ್ರಮುಖರಾದ ಬಿ.ಈ.ಶಿ ವಯ್ಯ, ಜಾನಕಿ ವೆಂಕಟೇಶ್, ಎನ್.ಕೆ. ಅಪ್ಪಸ್ವಾಮಿ, ವಿ.ಎಲ್. ಸುರೇಶ್, ಟಿ.ಆರ್. ಪುರುಷೋತ್ತಮ್, ಎಂ.ಪಿ. ಕೃಷ್ಣರಾಜು, ಎಸ್.ಎಲ್. ಬಸವರಾಜು, ಕೆ.ರಮೇಶ್, ಎಸ್.ಪಿ. ಪೊನ್ನಪ್ಪ, ವಿ.ನಾಗರಾಜು, ಕೆ.ಆರ್. ಸತೀಶ್ ಸಲಹೆಗಳನ್ನು ನೀಡಿದರು.
ಕಾರ್ಯದರ್ಶಿ ಪಿ.ಉಮೇಶ್ ಕುಮಾರ್ ಸಂಘದ ಕಾರ್ಯ ಚಟುವಟಿಕೆಗಳ ವಿವರವನ್ನು ನೀಡಿದರು. ಸಂಘದ ಉಪಾಧ್ಯಕ್ಷ ವಿ.ಪಿ.ಸುರೇಶ್ ಸ್ವಾಗತಿಸಿ, ಮತ್ತೋರ್ವ ಉಪಾಧ್ಯಕ್ಷ ವಿ.ಕೆ.ದೇವಲಿಂಗಯ್ಯ ವಂದಿಸಿದರು.