ಮಡಿಕೇರಿ, ನ.೫ : ಕೊಡಗು ದಫ್ ಸಮಿತಿ ವತಿಯಿಂದ ಡಿ.೧೪ ಮತ್ತು ೧೫ ರಂದು ಮೂರನೇ ವರ್ಷದ ಜಿಲ್ಲಾ ಮಟ್ಟದ ಬೃಹತ್ ದಫ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್ ಸ್ಪರ್ಧೆಯ ಕುರಿತು ಮಾಹಿತಿ ನೀಡಿದರು.
ವೀರಾಜಪೇಟೆ ತಾಲೂಕಿನ ಚೊಕ್ಕಂಡಹಳ್ಳಿ ನಲ್ವತೊಕ್ಲು ಗ್ರಾಮದ ಮಸೀದಿಯ ಹಿಂಭಾಗದಲ್ಲಿರುವ ಮೈದಾನದಲ್ಲಿ ಎರಡು ದಿನಗಳ ಕಾಲ ಬೆಳಿಗ್ಗೆ ೧೦ ಗಂಟೆಯಿAದ ರಾತ್ರಿ ೮ ಗಂಟೆವರಗೆ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ. ಜಿಲ್ಲೆಯ ಎಲ್ಲಾ ಜಮಾಅತ್‌ನಿಂದ ತಲಾ ಒಂದರAತೆ ೧೦೦ ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.
ಪ್ರಥಮ ಬಹುಮಾನ ರೂ. ೨೦ ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ.೧೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಬಹುಮಾನ ರೂ ೧೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ಚತುರ್ಥ ಬಹುಮಾನ ರೂ. ೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ಉತ್ತಮ ಪ್ರದರ್ಶನ ನೀಡುವ ತಂಡಗಳಿಗೆ ವಿಶೇಷ ಟ್ರೋಫಿ ನೀಡಲಾಗುವದು.
ದಫ್ ಸ್ಪರ್ಧೆಯ ನಿಯಮ
ಭಾಗವಹಿಸುವ ತಂಡಗಳು ಡಿಸೆಂಬರ್ ೫ ಒಳಗೆ ತಂಡದ ಹೆಸರುಗಳನ್ನು ನೋಂದಾಯಿಸಿಕೊಳ್ಳತಕ್ಕದು, ಸಮವಸ್ತç. ಸಮಯ ಪಾಲನೆ ಕಡ್ಡಾಯವಾಗಿರುತ್ತದೆ. ಪ್ರತಿ ತಂಡಕ್ಕೆ ನಿರಂತರ ನಾನ್ ಸ್ಟಾಪ್ ಸಮಯ ಪಾಲನೆ ೮ +೨=೧೦ನಿಮಿಷ ಆಗಿರುತ್ತೆ. ದಫ್ ಹಾಡುಗಾರಿಕೆಯಲ್ಲಿ ಯಾವದೇ ಭಾಷೆಯನ್ನು ಇಸ್ಲಾಂನ ನಿಯಮದಡಿ ಯಲ್ಲಿ ಬಳಸಬಹುದಾಗಿದೆ. ಸ್ಪರ್ಧೆಯಲ್ಲಿ ಯಾವದೇ ಸಂಘಟನೆಗಳಿಗೆ ಸೀಮಿತವಾಗಿರುವ ಹಾಡುಗಳನ್ನು ಹಾಡುವಂತಿಲ್ಲ. ಉತ್ತಮ ಹಾಡುಗಾರಿಕೆಗೆ ಆಯ್ಕೆಯಾಗುವ ಹಾಡುಗಾರರಿಗೆ ಪ್ರಶಸ್ತಿ ನೀಡಲಾಗುವದು.
ಪ್ರತಿಯೊಂದು ಜಮಾಅತ್ ನಿಂದ ಒಂದು ತಂಡಕ್ಕೆ ಮಾತ್ರ ಅವಕಾಶವಿದ್ದು, ಎಲ್ಲಾ ತಂಡದ ಸದಸ್ಯರು ಹಾಗೂ ವ್ಯವಸ್ಥಾಪಕರು ಡಿ.೧೪ ರಂದು ಕಡ್ಡಾಯವಾಗಿ ಹಾಜರಿರಬೇಕು. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಸಮಾಜ ಸೇವಕರು, ಅಧಿಕಾರಿಗಳು, ಜನಪ್ರತಿನಿಧಿಗಳು, ದಾನಿಗಳು, ಧಾರ್ಮಿಕ ಮುಖಂಡರು ಹಾಗೂ ಪಂಡಿತರು ಭಾಗವಹಿಸಲಿದ್ದಾರೆ ಎಂದು ಅಬ್ದುಲ್ ಮಜೀದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಫ್ ಸಮಿತಿ ಆಡಳಿತ ಮಂಡಳಿಯ ಅಧ್ಯಕ್ಷ ಅಬ್ದುಲ್ ಮಜೀದ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಷರೀಫ್ ಕುಶಾಲನಗರ, ಸಹ ಕಾರ್ಯದರ್ಶಿಗಳಾದ ಷಫೀಕ್ ಗುಂಡಿಗೆರೆ, ಅಶ್ರಫ್ ಎಮ್ಮೆಮಾಡು, ಖಜಾಂಚಿ ಮಾಜಿ ಸೈನಿಕ ಬಶೀರ್ ಪೊನ್ನಂಪೇಟೆ ಹಾಗೂ ಸಲಹೆಗಾರ ಎಸ್.ಎಂ.ಮುಬಾರಕ್ ಸಿದ್ದಾಪುರ ಉಪಸ್ಥಿತರಿದ್ದರು.