ಸೋಮವಾರಪೇಟೆ, ನ. ೪: ಗ್ರಾಮೀಣ ಭಾಗದಲ್ಲಿ ತೆರಿಗೆ ಕಟ್ಟುವಂತೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲು ಸರ್ಕಾರದ ಆದೇಶವಿದೆಯೆ? ಮಳೆಹಾನಿಯಿಂದ ಕೃಷಿಕರು ಫಸಲು ನಷ್ಟ ಅನುಭವಿಸಿ ಸಂಕಷ್ಟದಲ್ಲಿರುವಾಗ ತೆರಿಗೆ ಕಟ್ಟಿ ಎಂದು ಪೀಡಿಸುವದು ಎಷ್ಟು ಸರಿ? ಎಂದು ಗ್ರಾಮಸಭೆಯಲ್ಲಿ ಸಾರ್ವಜನಿಕರು ಪ್ರಶ್ನಿಸಿದರು.

ಗೌಡಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸಭೆ ಅಧ್ಯಕ್ಷೆ ಜಿ.ಬಿ.ನಾಗರತ್ನ ಅವರ ಅಧ್ಯಕ್ಷತೆಯಲ್ಲಿ ನವದುರ್ಗಾ ಪರಮೇಶ್ವರಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ವಿಎಸ್‌ಎಸ್‌ಎನ್ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್, ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಈ ಮಧ್ಯೆ ತೆರಿಗೆ ಕಟ್ಟಿ ಎಂದು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿ ಪೀಡಿಸುವದು ಸರಿಯಲ್ಲ ಎಂದರು.

ಒAದು ವರ್ಷ ಎರಡು ತಿಂಗಳು ಕಳೆದರೂ ಗ್ರಾಮಸಭೆಯನ್ನು ನಡೆಸದಿರುವ ಬಗ್ಗೆ ಗ್ರಾಮಸ್ಥರು ಪಿಡಿಒ ಹಾಗು ಆಡಳಿತ ಮಂಡಳಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದೀಗ ಪಿಡಿಒ ಆಗಿ ಅಧಿಕಾರ ಸ್ವೀಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿಪಡಿಸಲಾಗುವದು ಎಂದು ಪಿಡಿಒ ಮೇದಪ್ಪ ಹೇಳಿದರು.

ಗ್ರಾಮಸಭೆಯನ್ನು ಒಂದು ದಿನ ಮುಂಚಿತವಾಗಿ ನಡೆಸಿರುವದರಿಂದ ಸೂಕ್ತ ಮಾಹಿತಿ ಇಲ್ಲದೆ ಗ್ರಾಮಸ್ಥರು ಸಭೆಗೆ ಹಾಜರಾಗಿಲ್ಲ. ಗ್ರಾಮಸಭೆಯನ್ನು ಮುಂದೂಡಬಹುದೇ ಹೊರತು, ಸಭೆಯ ದಿನಾಂಕದ ಹಿಂದಿನ ದಿನ ನಡೆಸುವದು ನಿಯಮಬಾಹಿರ ಎಂದು ವಿ.ಎನ್.ನಾಗರಾಜ್, ಕೂಗೂರು ಜಯಪ್ಪ ಅಸಮಾಧಾನ ವ್ಯಕ್ತಪಡಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಸೂಚನೆ ಮೇರೆಗೆ ಸಭೆ ಕರೆಯಲಾಗಿದೆ ಎಂದು ಪಿಡಿಒ ಹೇಳಿದರು.

ನಂದಿಗುAದ ಗ್ರಾಮದೊಳಗೆ ವಿದ್ಯುತ್ ಕಂಬವನ್ನು ದುರಸ್ತಿಪಡಿಸುವಂತೆ ಕಳೆದ ಗ್ರಾಮಸಭೆಯಲ್ಲೇ ತಿಳಿಸಲಾಗಿತ್ತು. ಆದರೆ ಇದುವರೆಗೆ ಕ್ರಮಕೈಗೊಂಡಿಲ್ಲ ಎಂದು ನಂದಿಗುAದ ಗ್ರಾಮದ ದಿವಾಕರ್ ಆರೋಪಿಸಿದರು. ಸ್ಥಳ ಪರಿಶೀಲನೆ ಮಾಡಿದ್ದೇನೆ. ಅಲ್ಲಿರುವ ತೆಂಗಿನ ಮರವನ್ನು ತೆರವು ಗೊಳಿಸಿದರೆ, ಮಾರ್ಗ ಸರಿಪಡಿಸಲಾಗುವದು ಎಂದು ಸೆಸ್ಕ್ ಕಿರಿಯ ಇಂಜಿನಿಯರ್ ಹೇಮಂತ್ ಭರವಸೆ ನೀಡಿದರು. ವಿವಿಧ ಇಲಾಖಾಧಿಕಾರಿಗಳು ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತಾಪಂ ಸದಸ್ಯೆ ಕುಸುಮಾ ಅಶ್ವಥ್, ಉಪಾಧ್ಯಕ್ಷೆ ಜಿ.ಕೆ.ಸವಿತ, ಸದಸ್ಯರಾದ ಪ್ರೇಮಾ, ಎಚ್.ಎಂ.ಜಿತೇAದ್ರ, ಎಸ್.ಎನ್.ಪೃಥ್ವಿ, ಹೇಮಂತ್, ಎಂ.ಡಿ.ಹರೀಶ್, ಧರ್ಮಾಚಾರಿ, ಶಿವಮ್ಮ, ಲಕ್ಷಿö್ಮÃ, ನೋಡೆಲ್ ಅಧಿಕಾರಿ ಸತೀಶ್ ಇದ್ದರು.