ಮಡಿಕೇರಿ, ನ.೪: ರೋಟರಿ ವಲಯ ೬ ರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಡಿಕೇರಿಯ ರೋಟರಿ ಮಿಸ್ಟಿಹಿಲ್ಸ್ ೧೦ ಬಹುಮಾನಗಳನ್ನು ಪಡೆಯುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.

ಹುಣಸೂರಿನಲ್ಲಿ ಆಯೋಜಿತ ಕಲಾಸಂಗಮ ಹೆಸರಿನ ರೋಟರಿ ವಲಯ ೬ರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ೧೦ ಬಹುಮಾನಗಳನ್ನು ವಿವಿಧ ಸಾಂಸ್ಕೃತಿಕ ಸ್ಪರ್ಧಾ ವಿಭಾಗಗಳಲ್ಲಿ ಪಡೆದಿದೆ.

ಪುರುಷರ ಹಾಡುಗಾರಿಕೆಯಲ್ಲಿ ಶ್ರೀಹರಿ ಪ್ರಥಮ, ೧೪ ವರ್ಷದ ಮೇಲ್ಪಟ್ಟವರ ಹಾಡುಗಾರಿಕೆಯಲ್ಲಿ ಶಮಿಕ್‌ರೈ ಪ್ರಥಮ, ಡ್ಯುಯೆಟ್ ಹಾಡುಗಾರಿಕೆಯಲ್ಲಿ ವಿಜಯಲಕ್ಷಿ÷್ಮÃ ಚೇತನ್, ಶಮಿಕ್ ರೈ ಪ್ರಥಮ, ೧೪ ವರ್ಷದ ಕೆಳಗಿನವರ ಹಾಡುಗಾರಿಕೆ ಸ್ಪರ್ಧೆಯಲ್ಲಿ ಅನೂಹ್ಯರವಿಶಂಕರ್ ತೃತೀಯ, ೧೪ ವರ್ಷದೊಳಗಿನವರ ನೃತ್ಯ ಸ್ಪರ್ಧೆಯಲ್ಲಿ ಅನೂಹ್ಯ ರವಿಶಂಕರ್ ದ್ವಿತೀಯ, ೧೪ ವರ್ಷದ ಮೇಲ್ಪಟ್ಟವರಿಗಾಗಿನ ನೃತ್ಯ ಸ್ಪರ್ಧೆಯಲ್ಲಿ ಅಪೇಕ್ಷಾರೈ ದ್ವಿತೀಯ, ಸಮೂಹ ಹಾಡುಗಾರಿಕೆಯಲ್ಲಿ ದ್ವಿತೀಯ, ಕಿರುನಾಟಕ ವಿಭಾಗದಲ್ಲಿ ದ್ವಿತೀಯ, ಸಮೂಹ ನೃತ್ಯ ವಿಭಾಗದಲ್ಲಿ ದ್ವಿತೀಯ ಮತ್ತು ಸ್ಕಿಟ್ ನಲ್ಲಿ ಪ್ರಥಮ ಬಹುಮಾನಗಳನ್ನು ರೋಟರಿ ಮಿಸ್ಟಿ ಹಿಲ್ಸ್ ತನ್ನದಾಗಿಸಿಕೊಂಡು ಚಾಂಪಿಯನ್ ಪಟ್ಟ ಪಡೆದಿದೆ ಎಂದು ಮಿಸ್ಟಿ ಹಿಲ್ಸ್ಅಧ್ಯಕ್ಷ ಎಂ.ಆರ್.ಜಗದೀಶ್ ಪ್ರಶಾಂತ್ ಹಾಗೂ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ತಿಳಿಸಿದ್ದಾರೆ.

ಕಲಾಸಂಗಮ ಸಾಂಸ್ಕೃತಿಕ ಸ್ಪರ್ಧೆಗಳನ್ನು ರೋಟರಿ ವಲಯ ೬ರ ಸಹಾಯಕ ಗವರ್ನರ್ ಪಿ. ನಾಗೇಶ್ ಉದ್ಘಾಟಿಸಿದರು. ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ., ಜೋನಲ್ ಲೆಫ್ಟಿನೆಂಟ್ ಅನಂತರಾಜೇ ಅರಸ್, ಝೀ ಟಿ.ವಿ. ಸರಿಗಮ ರಿಯಾಲಿಟಿ ಶೋನ ತೀರ್ಪುಗಾರ ದೇವಾನಂದ್ ವರಪ್ರಸಾದ್, ಸ್ಪರ್ಧೆಯ ಆಯೋಜಕರಾದ ಹುಣಸೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಚಂದ್ರಾನAದನ್, ಕಾರ್ಯದರ್ಶಿ ಶ್ರೀನಾಥ್, ಪಿರಿಯಾಪಟ್ಟಣ ರೋಟರಿ ಕ್ಲಬ್ ಅಧ್ಯಕ್ಷ ಡಿ. ಸುಬ್ರಮಣ್ಯ, ಕಾರ್ಯದರ್ಶಿ ವಿನಯ್ ಶೇಖರ್ ಹಾಜರಿದ್ದರು. ರೋಟರಿ ವಲಯದ ವಿವಿಧ ಕ್ಲಬ್‌ಗಳ ಸಾಂಸ್ಕೃತಿಕ ತಂಡಗಳು ಪಾಲ್ಗೊಂಡಿದ್ದವು.