ವೀರಾಜಪೇಟೆ, ನ. ೪: ಐದು ವರ್ಷಗಳ ಹಿಂದೆ ನಗರದ ಹೊಟೇಲೊಂದರಲ್ಲಿ ಹಾಡಹಗಲೆ ನಡೆದ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ನ್ಯಾಯಾಲಯವು ಪ್ರಕರಣದ ಶಿಕ್ಷೆಯ ಪ್ರಮಾಣದ ತೀರ್ಪನ್ನು ಮುಂದೂಡಿದೆ.

ವೀರಾಜಪೇಟೆ ನಗರದ ಹೃದಯಭಾಗದಲ್ಲಿರುವ ಸಂಗA ಹೊಟೇಲ್ ೨೦೧೪ರಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ಚಾಮಿಯಾಲ ಗ್ರಾಮದ ನಿವಾಸಿ ಇಕ್ಬಾಲ್ ಹಸನ್ ಎಂಬವರನ್ನು ಗುಂಡಿಕ್ಕಿ ಕೊಲೆಗೈದ ಪ್ರಕರಣಕ್ಕೆ ಸಂಬAಧಿಸಿದAತೆ ಇಂದು ಆರೋಪಿತರಿಗೆ ಶಿಕ್ಷೆಯ ಪ್ರಮಾಣವನ್ನು ವಿಧಿಸುವ ಸಾಧ್ಯತೆ ಇತ್ತು. ಆದರೆ, ದೆಹಲಿಯ ನ್ಯಾಯಾಲಯದ ಆವರಣದಲ್ಲಿ ನ್ಯಾಯವಾದಿಗಳ ಮೇಲೆ ಪೊಲೀಸರಿಂದ ಹಲ್ಲೆ ನಡೆದ ಘಟನೆಗೆ ಸಂಬAಧಿಸಿದAತೆ ಇಂದು ನಡೆಯಬೇಕಾಗಿದ್ದ ನ್ಯಾಯಾಲಯಗಳ ಕಲಾಪಗಳನ್ನು ಸ್ಥಗಿತಗೊಳಿಸಿದ್ದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣದ ತೀರ್ಪನ್ನು ತಾ. ೭ ರಂದು ನೀಡಲಿದೆ ಎಂದು ನ್ಯಾಯಾಲಯದ ಕಚೇರಿ ಮಾಹಿತಿ ನೀಡಿದೆ.

ಅ. ೩೦ ರಂದು ನ್ಯಾಯಾಲಯವು ಕೊಲೆ ಆರೋಪಿಗಳ ಮೇಲೆ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತರು ಎಂದು ಪರಿಗಣಿಸಿ ಶಿಕ್ಷೆ ಪ್ರಮಾಣದ ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು.

ಕಲಾಪಗಳು ಸ್ಥಗಿತ

ದೆಹಲಿಯ ನ್ಯಾಯಾಲಯದ ಆವರಣದಲ್ಲಿ ನ್ಯಾಯವಾದಿಗಳ ಮೇಲೆ ಪೊಲೀಸರ ಹಲ್ಲೆ ಖಂಡಿಸಿ ಇಂದು ವೀರಾಜಪೇಟೆ ನ್ಯಾಯಾಲಯದಲ್ಲಿ ನಡೆಯಬೇಕಿದ್ದ ಕಲಾಪಗಳು ಸ್ಥಗಿತಗೊಂಡಿದ್ದವು.

ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಎಂ.ಎA. ನಂಜಪ್ಪ ಅವರು ದೆಹಲಿಯ ನ್ಯಾಯಾಲಯ ಆವರಣದಲ್ಲಿ ನಡೆದ ಘಟನೆಯನ್ನು ಖಂಡಿಸುವದಾಗಿ ಹೇಳಿದರು.

ಕಾರ್ಯದÀರ್ಶಿ ಎನ್.ಎಸ್. ಪ್ರಶಾಂತ್, ಮತ್ತು ಸಹ ಕಾರ್ಯದÀರ್ಶಿ ಪ್ರೀತಂ ಮತ್ತು ವಕೀಲ ಸಂಘದ ಸದಸ್ಯರು ಮತ್ತು ವಕೀಲರುಗಳು ಹಾಜರಿದ್ದರು.