ಗೋಣಿಕೊಪ್ಪ ವರದಿ, ನ. ೩: ಹಾಕಿಕೂರ್ಗ್ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆದ ಬಿ. ಡಿವಿಜನ್ ಹಾಕಿ ಲೀಗ್‌ನಲ್ಲಿ ಹೆಚ್ಚು ಅಂಕ ಪಡೆದ ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್, ಕಿರುಗೂರು ಸ್ಪೋರ್ಟ್ಸ್ ಕ್ಲಬ್, ಬೊಟ್ಯತ್ನಾಡ್ ಹಾಗೂ ಹುದಿಕೇರಿ ಮಲೆನಾಡ್ ತಂಡಗಳು ಎ. ಡಿವಿಜನ್‌ಗೆ ಅರ್ಹತೆ ಗಿಟ್ಟಿಸಿಕೊಂಡವು. ಭಾನುವಾರ ನಡೆದ ಪಂದ್ಯಾಟದ ಮೂಲಕ ಬಿ. ಡಿವಿಜನ್ ಹಾಕಿ ಲೀಗ್‌ಗೆ ತೆರೆ ಕಂಡಿತು.
ಬಿ. ಡಿವಿಜನ್ ಲೀಗ್‌ನಲ್ಲಿ ಪಾಲ್ಗೊಂಡ ೧೭ ತಂಡಗಳಲ್ಲಿ ೪ ತಂಡಗಳು ಎ. ಡಿವಿಜನ್‌ಗೆ ಅರ್ಹತೆ ಪಡೆದುಕೊಂಡವು. ಉಳಿದ ೧೩ ತಂಡಗಳು ಟೂರ್ನಿಯಲ್ಲಿ ಉತ್ತಮ ಪಯಪೋಟಿ ನೀಡಿ ನಿರ್ಗಮಿಸಿದವು.
ಫಲಿತಾಂಶ: ಭಾನುವಾರ ನಡೆದ ಪಂದ್ಯಾಟದಲ್ಲಿ ನಾಲ್ಕು ತಂಡಗಳಾದ ಡ್ರಿಬ್ಲ್ ಹೆಂಪ್, ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್, ಬೊಟ್ಯತ್ನಾಡ್ ಹಾಗೂ ಮಲೆನಾಡ್ ತಂಡಗಳು ಗೆಲವು ಪಡೆದುಕೊಂಡಿತು. ರೋಚಕ ಪ್ರದರ್ಶನ ನೀಡಿದ ಜನರಲ್ ತಿಮ್ಮಯ್ಯ ಅಕಾಡೆಮಿ ಹಾಗೂ ಸೋಮವಾರಪೇಟೆ ಡಾಲ್ಫಿನ್ಸ್, ಬೇತು ಹಾಗೂ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ಬಿ, ಕಾಲ್ಸ್ ಹಾಗೂ ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡಗಳ ನಡುವಿನ ಪಂದ್ಯಗಳು ಡ್ರಾ ಸಾಧನೆ ಮಾಡಿದವು.
ಡ್ರಾ ಸಾಧಕ ತಂಡಗಳು: ಜನರಲ್ ತಿಮ್ಮಯ್ಯ ಅಕಾಡೆಮಿ ಹಾಗೂ ಸೋಮವಾರಪೇಟೆ ಡಾಲ್ಫಿನ್ಸ್ ತಂಡಗಳ ನಡುವಿನ ಪಂದ್ಯ ೧-೧ ಗೋಲುಗಳಿಂದ ಡ್ರಾಗೊಂಡಿತು. ಜನರಲ್ ತಿಮ್ಮಯ್ಯ ತಂಡದ ಪರ ೩೧ ನೇ ನಿಮಿಷದಲ್ಲಿ ನಾಣಯ್ಯ, ಡಾಲ್ಫಿನ್ಸ್ ಪರ ಲೀಲೇಶ್ ಗೋಲು ಹೊಡೆದರು.
ಬೇತು ಮತ್ತು ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ (ಬಿ) ತಂಡಗಳ ನಡುವಿನ ಪಂದ್ಯ ಗೋಲುಗಳಿಲ್ಲದೆ ಡ್ರಾದಲ್ಲಿ ಅಂತ್ಯ ಕಂಡಿತು.
ಕಾಲ್ಸ್ ಹಾಗೂ ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡಗಳ ನಡುವಿನ ಪಂದ್ಯ ೧-೧ ಗೋಲುಗಳಿಂದ ಡ್ರಾಗೊಂಡಿತು. ಕಾಲ್ಸ್ ಪರ ೨೭ ನೇ ನಿಮಿಷದಲ್ಲಿ ಶ್ರವಣ್, ಕೂಡಿಗೆ ಪರ ೫ ನೇ ನಿಮಿಷದಲ್ಲಿ ವೀರೇಶ್ ತಲಾ ಒಂದೊAದು ಗೋಲು ಹೊಡೆದರು.
ಗೆಲವಿನ ಪಂದ್ಯಗಳು: ಡ್ರಿಬ್ಲ್ ಹೆಂಪ್ ತಂಡವು ಮರೆನಾಡ್ ವಿರುದ್ಧ ೫-೦ ಗೋಲುಗಳ ಭರ್ಜರಿ ಗೆಲವು ದಾಖಲಿಸಿತು. ಹೆಂಪ್ ಪರ ೩೧ ಹಾಗೂ ೩೪ ನೇ ನಿಮಿಷದಲ್ಲಿ ನಾಣಯ್ಯ ೨ ಗೋಲು, ೯ ನೇ ನಿಮಿಷದಲ್ಲಿ ಕರುಂಬಯ್ಯ, ೧೬ ರಲ್ಲಿ ಉತ್ತಪ್ಪ, ೨೫ ರಲ್ಲಿ ಪೂವಣ್ಣ ತಲಾ ಒಂದೊAದು ಗೋಲು ಹೊಡೆದರು.
ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡವು ವೀರಾಜಪೇಟೆ ಎಫ್‌ಎಂಸಿ ತಂಡದ ವಿರುದ್ದ ೨-೧ ಗೋಲುಗಳ ಗೆಲವು ಪಡೆಯಿತು. ಅಮ್ಮತ್ತಿ ಪರ ೧೫ ನೇ ನಿಮಿಷದಲ್ಲಿ ದಿಲನ್, ಎಫ್‌ಎಂಸಿ ಪರ ೨೮ ರಲ್ಲಿ ರಕ್ಷಿತ್ ಗೋಲು ಬಾರಿಸಿದರು.
ಮಲೆನಾಡ್ ತಂಡ ಎಸ್‌ಆರ್‌ಸಿ ಕಾಕೋಟುಪರಂಬು ತಂಡವನ್ನು ೧-೦ ಗೋಲುಗಳಿಂದ ಮಣಿಸಿತು. ಮಲೆನಾಡ್ ಪರ ೧೨ ನೇ ನಿಮಿಷದಲ್ಲಿ ಪೊನ್ನಣ್ಣ ೧ ಗೋಲು ಹೊಡೆದು ಗೆಲವಿನ ರೂವರಿಯಾದರು.
ಬೊಟ್ಯತ್ನಾಡ್ ತಂಡವು ಪೆರೂರಿಯನ್ಸ್ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು. ಬೊಟ್ಯತ್ನಾಡ್ ಪರ ೮ ರಲ್ಲಿ ಪೊನ್ನಣ್ಣ, ೧೬ ರಲ್ಲಿ ಸೋನಿ, ಪೆರೂರಿಯನ್ಸ್ ಪರ ೧೮ ನೇ ನಿಮಿಷದಲ್ಲಿ ಅಯ್ಯಪ್ಪ ಗೋಲು ಹೊಡೆದರು.