ಕರಿಕೆ, ನ. ೩: ಕರಿಕೆ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಸಮುದಾಯ ದತ್ತ ಶಾಲೆ ಶೈಕ್ಷಣಿಕ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಸ.ಹಿ.ಪ್ರಾಥಮಿಕ ಶಾಲೆ ಕರಿಕೆ ಕಾಲೋನಿ ಇಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಮಚ್ಚಾಡೊ ಅವರು ಭೇಟಿ ನೀಡಿ ಕಾರ್ಯಕ್ರಮ ವೀಕ್ಷಿಸಿ ಸಲಹೆ ಸೂಚನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊದ್ದೆಟ್ಟಿ ಮಿತ್ರಕುಮಾರ ವಹಿಸಿದ್ದರು. ಮುಖ್ಯ ಶಿಕ್ಷಕ ಎನ್.ಎಸ್. ಕುಮಾರ್ ಅವರು ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ವಿವರಿಸಿದರು.ವೀಕ್ಷಕರಾಗಿ ಕರಿಕೆ ಪ್ರೌಢಶಾಲೆ ಶಿಕ್ಷಕ ನಿಂಗಣ್ಣ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ನಳಿನಾಕ್ಷಿ ಬಿ.ಡಿ.ಸಮಿತಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.