ಗೋಣಿಕೊಪ್ಪಲು, ನ. ೨ : ಕಿತ್ತಳೆ ನಾಡು ಎಂದು ಪ್ರಸಿದ್ಧಿ ಪಡೆದು ವಿಶಿಷ್ಟ ರುಚಿಯುಳ್ಳ ಕಿತ್ತಳೆ ಹಣ್ಣುಗಳನ್ನು ಹೊರರಾಜ್ಯಗಳಿಗೆ ರಫ್ತು ಮಾಡುತ್ತಿದ್ದ ಕೊಡಗಿನ ಕಿತ್ತಳೆಗೆ ವಿಶೇಷವಾದ ಸ್ಥಾನವಿದೆ.ಕೊಡಗಿನ ಕಿತ್ತಳೆಯೂ ಬೇರೆ ಯಾವದೇ ರಾಜ್ಯಕ್ಕೆ ಹೋಲಿಸಿದರೆ ಇದನ್ನು ಮೀರಿಸುವ ಕಿತ್ತಳೆ ಬೇರೆ ರಾಜ್ಯದಲ್ಲಿ ಕಂಡು ಬಂದಿಲ್ಲ. ಕೊಡಗಿನ ಕಾಫಿ ತೋಟಗಳಲ್ಲಿ ಕಿತ್ತಳೆ ಬೆಳೆಗಳನ್ನು ರೈತರು ಅನಾದಿಕಾಲದಿಂದಲೂ ಬೆಳೆಯುತ್ತ ಬಂದಿದ್ದಾರೆ. ರೈತರು ಬೆಳೆದ ಕಿತ್ತಳೆ ಹಣ್ಣುಗಳನ್ನು ದೂರದ ಬಂಧು ಮಿತ್ರರಿಗೆ, ನೆಂಟರಿಷ್ಟರಿಗೆ ಕಳುಹಿಸಿಕೊಡುವದು ವಾಡಿಕೆ. ಉಳಿದ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಸಹಜವಾಗಿ ದ.ಕೊಡಗಿನ ವಿವಿಧ ಭಾಗದಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಕಿತ್ತಳೆ ಹಣ್ಣುಗಳಿಗೆ ಸಮೀಪದ ಕೇರಳ ರಾಜ್ಯದಲ್ಲಿ ವಿಶೇಷವಾದ ಬೇಡಿಕೆಯಿದೆ. ಈ ಭಾಗದ ವ್ಯಾಪಾರಸ್ಥರು ಆರಂಭದಲ್ಲಿಯೇ ರೈತರ ತೋಟಗಳಿಗೆ ಭೇಟಿ ನೀಡಿ ಕಿತ್ತಳೆ ಹಣ್ಣುಗಳಿಗೆ ಮುಂಗಡ ಹಣ ನೀಡಿ ತೆರಳುತ್ತಾರೆ. ಸೆಪ್ಟೆಂಬರ್,ಅಕ್ಟೋಬರ್ ತಿಂಗಳಿನಲ್ಲಿ ಈ ಹಣ್ಣುಗಳು ಕೊಯ್ದು ರೈತರಿಗೆ ನಿಗದಿತ ದರ ನೀಡಿ ತೆರಳುತ್ತಿದ್ದರು. ಇದರಿಂದ ಸಹಜವಾಗಿಯೇ ರೈತನ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತಿತ್ತು. ಆದರೆ ಇದೀಗ ಕೊಡಗಿನ ಕಿತ್ತಳೆಗೆ ವಿಚಿತ್ರವಾದ ಪಂಗಸ್ ಬಂದಿರುವದರಿAದ ಕಿತ್ತಳೆ ಗಿಡಗಳಲ್ಲಿ ಬೆಳೆದು ನಿಂತಿರುವ ಹಣ್ಣುಗಳು ಒಂದೇ ಸಮನೆ ಉದುರಲಾರಂಭಿಸಿವೆ. ಇದರಿಂದ ರೈತ ಕಂಗಾಲಾಗಿದ್ದಾನೆ.
ವ್ಯಾಪಾರಿಯಿಂದ ಮುಂಗಡ ಹಣ ಪಡೆದಿದ್ದ ರೈತ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ದ.ಕೊಡಗಿನ ವಿವಿಧ ಭಾಗದಲ್ಲಿ ಕಿತ್ತಳೆ ಹಣ್ಣುಗಳು ಈ ಬಾರಿ ಸುರಿದ ಭಾರೀ ಮಳೆಯಿಂದ ತೇವಾಂಶ ಹೆಚ್ಚಾಗಿದ್ದು ಮರದಲ್ಲಿರುವ ಕಿತ್ತಳೆ ಹಣ್ಣುಗಳು ಒಂದೇ ಸಮನೆ ಉದುರಲಾರಂಭಿಸಿವೆ. ಇದರಿಂದ ರೈತ ಉಳಿದಿರುವ ಹಣ್ಣುಗಳನ್ನು ಸಹಿತ ಉಳಿಸಿಕೊಳ್ಳಲಾಗದ ಪರಿಸ್ಥಿತಿಗೆ ತಲುಪಿದ್ದಾನೆ. ದ.ಕೊಡಗಿನ ಕಾನೂರಿನಲ್ಲಿರುವ ರೈತ ಮಚ್ಚಮಾಡ ಕಂದಾ ಭೀಮಯ್ಯ ತನ್ನ ತೋಟದಲ್ಲಿ ೫೦೦ಕ್ಕೂ ಅಧಿಕ ಕಿತ್ತಳೆ ಮರಗಳನ್ನು ಬೆಳೆಸಿದ್ದಾರೆ.ವಾರ್ಷಿಕವಾಗಿ ಇದರಿಂದ ೨ ಲಕ್ಷ ಆದಾಯ ನಿರೀಕ್ಷಿಸಲಾಗುತಿತ್ತು. ಇವರ ತೋಟದಲ್ಲಿ ಬೆಳೆದ ಕಿತ್ತಳೆ ಹಣ್ಣುಗಳಿಗೆ ವಿಶೇಷವಾದ ಬೇಡಿಕೆ ಇತ್ತು.ಉಳಿದ ವಾಣಿಜ್ಯ ಬೆಳೆಗಳಂತೆ ಕಿತ್ತಳೆ ಬೆಳೆಯನ್ನು ಕೂಡ ಕಾಲಕ್ಕೆ ತಕ್ಕಂತೆ ನೀರು,ರಸಗೊಬ್ಬರ ನೀಡಿ ಬೆಳೆಯಲಾಗುತಿತ್ತು. ಇದರಿಂದ ಉತ್ತಮ ಬೆಳೆಯು ಇವರ ಕೈ ಸೇರಿತ್ತು. ಆದರೆ ಈ ಬಾರಿ ಸುರಿದ ಬಾರಿ ಮಳೆಯಿಂದ ತೋಟದಲ್ಲಿರುವ ಪ್ರತಿ ಗಿಡದಲ್ಲಿಯೂ ಅಪಾರ ಪ್ರಮಾಣದಲ್ಲಿ ಬಿಟ್ಟಿದ್ದ ಹಣ್ಣುಗಳು ನೆಲಕ್ಕೆ ಉದುರಿ ಬಿದ್ದಿವೆ.
ವಿಶೇಷ ಗುಣವಿದೆ : ತನ್ನ ಬಣ್ಣ ಹಾಗೂ ಸುವಾಸನೆಯಿಂದಲೇ ಎಲ್ಲರನ್ನು ಆಕರ್ಷಿಸುವ ಕಿತ್ತಳೆ ಬಹುತೇಕರಿಗೆ ಇಷ್ಟವಾಗುವ ಆರೋಗ್ಯಕರ ಹಣ್ಣು. ಒಂದು ಸಾಮಾನ್ಯ ಗಾತ್ರ ಹಣ್ಣಿನಲ್ಲಿ ವಿಟಮಿನ್ ಸಿ ಶೇ.೯೩ ನಾರಿನಾಂಶ ಶೇ.೧೩., ವಿಟಮಿನ್ ಬಿ೧ ಶೇ. ೯, ಲವಣಾಂಶ ಶೇ. ೭ ಪೋಟಾಶಿಯಂ ಶೇ.೭ ಮತ್ತು ಕಾಲ್ಯಿಯಂ ಶೇ. ೫ರಷ್ಟಿದೆ. ವಿಶೇಷವಾಗಿ
(ಮೊದಲ ಪುಟದಿಂದ) ವಿಟಮಿನ್ ಸಿ ಅಂಶವು ರೋಗ ನಿವಾರಕ ಶಕ್ತಿಯನ್ನು ಹೆಚ್ಚಿಸಿ ಸದಾ ಆರೋಗ್ಯವಂತರಾಗಿರುವAತೆ ಮನುಷ್ಯನನ್ನು ಕಾಪಾಡುವದಲ್ಲದೆ ರಕ್ತದೊತ್ತಡವನ್ನು ನಿವಾರಿಸಿ ರಕ್ತ ಸಂಚಾರವನ್ನು ಸುಗಮಗೊಳಿಸುವ ಅನುಕೂಲ ಈ ಹಣ್ಣಿನಲ್ಲಿದೆ.
ಕ್ಯಾನ್ಸರ್ ತಡೆಗಟ್ಟುವ ಒಳ್ಳೆಯ ಅಂಶಗಳು ಈ ಹಣ್ಣಿನಲ್ಲಿ ಯಥೇಚ್ಚವಾಗಿರುವದರಿಂದ ನಿತ್ಯ ಒಂದು ಹಣ್ಣನ್ನು ಅಥವಾ ಹಣ್ಣಿನ ಪಾನೀಯವನ್ನು ಸೇವಿಸುವವರು ಇದ್ದಾರೆ. ಇದರಲ್ಲಿರುವ ಲವಣಾಂಶ ಪೋಟಾಶಿಯಂ ಹಾಗೂ ವಿಟಮಿನ್ ಸಿ ಹೃದಯವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ. ಹಣ್ಣಿನ ನಿಯಮಿತ ಸೇವೆಯಿಂದ ಹೃದಯಕ್ಕೆ ಸಂಬAಧಿಸಿದAತಹ ಯಾವದೇ ಖಾಯಿಲೆಗಳು ಬರುವ ಅಪಾಯ ಕಡಿಮೆ. ಮೂತ್ರಕೋಶದಲ್ಲಿನ ಹರಳುಗಳ ನಿವಾರಣೆಗೆ ಮತ್ತು ರಕ್ತದಲ್ಲಿನ ಸಕ್ಕರೆ ಕಡಿಮೆಗೊಳಿಸುವ ಶಕ್ತಿ ಕಿತ್ತಳೆ ರಸಕ್ಕಿದೆ. ಅತ್ಯುತ್ತಮವಾದ ಆಂಟಿಆಕ್ಸಿಡೆAಟ್ ಗುಣ ಹೊಂದಿರುವ ಹಣ್ಣನ್ನು ಪ್ರತಿನಿತ್ಯ ಸೇವಿಸುವದರಿಂದ ಚರ್ಮದ ಕಾಂತಿ ಹೆಚ್ಚಿಸುತ್ತಾ, ಸುಕ್ಕುಗಟ್ಟುವದನ್ನು ತಡೆಗಟ್ಟುತ್ತದೆ ಎಲ್ಲ ವಯಸ್ಸಿನ ಪ್ರಮಾಣದವರೆಗೂ ಆರೋಗ್ಯಕರ ಅಂಶಗಳನ್ನು ಕಿತ್ತಳೆ ಹಣ್ಣು ಹೊಂದಿದೆ.