ಸೋಮವಾರಪೇಟೆ,ನ.೪: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿದ್ದ ನಾನ್ ಕ್ಲಿನಿಕ್ ಹಾಗೂ ಡಿ.ಗ್ರೂಪ್‌ನ ನಾಲ್ಕು ಮಂದಿಯನ್ನು ಗುತ್ತಿಗೆದಾರರು ಕೆಲಸದಿಂದ ಏಕಾಏಕಿ ತೆಗೆದು ಹಾಕಿದ್ದು, ತಕ್ಷಣ ಇವರನ್ನು ಮರುನೇಮಕ ಮಾಡಬೇಕೆಂದು ಸೋಮವಾರಪೇಟೆ,ನ.೪: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿದ್ದ ನಾನ್ ಕ್ಲಿನಿಕ್ ಹಾಗೂ ಡಿ.ಗ್ರೂಪ್‌ನ ನಾಲ್ಕು ಮಂದಿಯನ್ನು ಗುತ್ತಿಗೆದಾರರು ಕೆಲಸದಿಂದ ಏಕಾಏಕಿ ತೆಗೆದು ಹಾಕಿದ್ದು, ತಕ್ಷಣ ಇವರನ್ನು ಮರುನೇಮಕ ಮಾಡಬೇಕೆಂದು ನೌಕರರು ಪ್ರಶ್ನೆ ಮಾಡಿದರೆ ಕೆಲಸದಿಂದ ತೆಗೆಯುತ್ತಿದ್ದಾರೆ ಎಂದು ಸೋಮಪ್ಪ ಆರೋಪಿಸಿದರು.
ತಕ್ಷಣ ನೌಕರರನ್ನು ಮರುನೇಮಕ ಮಾಡಬೇಕು. ದುಡಿಯುವ ವರ್ಗವನ್ನು ಗೌರವದಿಂದ ನಡೆಸಿಕೊಳ್ಳಬೇಕು. ಕೇಂದ್ರ ಸರ್ಕಾರದ ಸ್ವಚ್ಛ್ ಭಾರತ್ ಅಭಿಯಾನ ಸಾಕಾರಗೊಳ್ಳಬೇಕಾದರೆ ಸ್ವಚ್ಛತೆ ಕಾರ್ಮಿಕರ ಸೇವೆ ಅಪಾರವಾದುದು. ಅಂತಹವರನ್ನು ಕೆಲಸದಿಂದ ವಜಾ ಮಾಡದೆ, ಖಾಯಂಗೊಳಿಸಬೇಕೆAದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಕಳೆದ ೨೦ ವರ್ಷಗಳಿಂದ ನಾನ್‌ಕ್ಲಿನಿಕಲ್ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಲಾಗಿದೆ. ಬೇರೆ ಉದ್ಯೋಗವಿಲ್ಲದೇ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನ್ಯಾಯ ಒದಗಿಸಿಕೊಡಬೇಕು. ತಪ್ಪಿದಲ್ಲಿ ಆಸ್ಪತ್ರೆಯ ಮುಂಭಾಗವೇ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು. ಈ ಸಂಬAಧಿತ ಮನವಿ ಪತ್ರವನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಶಿವಪ್ರಸಾದ್ ಅವರಿಗೆ ನೀಡಿದರು.
ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನಿಲ್, ವೀರಾಜಪೇಟೆ ಪ.ಪಂ. ಸದಸ್ಯ ವಿ.ಆರ್. ರಜನಿಕಾಂತ್, ಪಿ.ಟಿ. ಸುಂದರ್, ಶೇಷಪ್ಪ, ಕಾರ್ಮಿಕರಾದ ಶಶಿ, ರಾಣಿ, ನಿರ್ಮಲ, ಸುಬ್ಬಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.