ಮಡಿಕೇರಿ, ನ.೪: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ”ದ ವತಿಯಿಂದ ನವದೆಹಲಿಯ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದವರು ಡಿಸೆಂಬರ್ ಮಾಹೆಯಲ್ಲಿ ನಡೆಸಲಿರುವ ಕಾಲೇಜು ಉಪನ್ಯಾಸಕರ ರಾಷ್ಟçಮಟ್ಟದ ಅರ್ಹತಾ ಪರೀಕ್ಷೆ ಹಾಗೂ ಕಿರಿಯ ಶಿಷ್ಯವೇತನ ಸಂಶೋಧನಾ ಸಹಾಯಕರ ಪರೀಕ್ಷೆಗಾಗಿ ಮತ್ತು ಮುಂದೆ ನಡೆಯಲಿರುವ ರಾಜ್ಯಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಗೆ ತರಬೇತಿಯನ್ನು ಆಯೋಜಿಸಿದೆ.
ಆಸಕ್ತರು ನವೆಂಬರ್ ೯ ರೊಳಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ ದ ಕಚೇರಿಯಲ್ಲಿ ಬೆಳಗ್ಗೆ ೧೧ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ರಮೇಶ್ ಬಿ. ಅವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ೦೮೨೧-೨೫೧೫೯೪೪ ನ್ನು ಸಂಪರ್ಕಿಸಬಹುದು.