ಮಡಿಕೇರಿ, ನ. ೪: ಪ್ರವಾಸಿ ತಾಣ ಮಾಂದಲ್‌ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಬಾಡಿಗೆ ಜೀಪುಗಳ ಪೈಪೋಟಿಯ ಭರಾಟೆಯಿಂದಾಗಿ ಉಂಟಾಗುತ್ತಿರುವ ಅಪಘಾತಗಳಿಂದಾಗಿ ಗ್ರಾಮಸ್ಥರ ಬಾಡಿಗೆ ಜೀಪುಗಳ ಪೈಪೋಟಿಯ ಭರಾಟೆಯಿಂದಾಗಿ ಉಂಟಾಗುತ್ತಿರುವ ಅಪಘಾತಗಳಿಂದಾಗಿ ಗ್ರಾಮಸ್ಥರ ನಾಳೆ ಜಿಲ್ಲಾಧಿಕಾರಿಗಳು ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಬಗ್ಗೆ ಪ್ರಕಟಿಸಿದ್ದಾರೆ.ಮಾಂದಲ್‌ಪಟ್ಟಿಗೆ ತೆರಳುವ ಮಾರ್ಗ ಸರಿ ಇಲ್ಲ ಎಂಬ ಕಾರಣದಿಂದ ರಸ್ತೆ ನಡುವಿನ ನಂದಿಮೊಟ್ಟೆ ಎಂಬಲ್ಲಿAದ ಬಾಡಿಗೆ ಜೀಪುಗಳಲ್ಲಿ ಪ್ರವಾಸಿಗರನ್ನುಕರೆದೊಯ್ಯುವ ಪರಿಪಾಠ ರೂಢಿಸಿಕೊಳ್ಳಲಾಯಿತು. ಆರಂಭದಲ್ಲಿ ನಾಲ್ಕೆöÊದು

(ಮೊದಲ ಪುಟದಿಂದ) ಸ್ಥಳೀಯರ ಜೀಪುಗಳು ಮಾತ್ರ ಸಂಚರಿಸುತ್ತಿದ್ದವು. ಲಾಭಾಂಶದ ಅರಿವಾಗುತ್ತಿದ್ದಂತೆ ಸ್ಥಳೀಯ ಯುವಕರು ಸೇರಿದಂತೆ ಹೊರಗಿನವರು ಕೂಡ ಜೀಪುಗಳನ್ನು ಓಡಿಸಲು ಆರಂಭಿಸಿದರು. ಇದೊಂದು ರೀತಿಯ ದಂಧೆಯಾಗಿ ಪರಿಣಮಿಸಿ ಪೈಪೋಟಿಯೊಂದಿಗೆ ಪರಸ್ಪರ ಚಾಲಕರುಗಳ ನಡುವೆಯೇ ಜಗಳ, ವಾಹನಗಳ ಅಪಘಾತಗಳೊಂದಿಗೆ ಸ್ಥಳೀಯ ಗ್ರಾಮಸ್ಥರ ಆಕ್ರೋಶ ಎದುರಿಸುವಂತಾಗಿತ್ತು. ಪ್ರಕರಣ ಪೊಲೀಸ್ ಮೆಟ್ಟಿಲೇರಿ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಅವರು ಅನಧಿಕೃತ ಖಾಸಗಿ ಜೀಪುಗಳ ಓಡಾಟಕ್ಕೆ ಕಡಿವಾಣ ಹಾಕಿದ್ದರು. ಹಳದಿ ಫಲಕ ಹೊಂದಿರುವ ಜೀಪುಗಳಿಗೆ ಇಂತಿಷ್ಟು ದರ ಕೂಡ ನಿಗದಿಪಡಿಸಲಾಗಿತ್ತು.

ಎಲ್ಲ ಗಾಳಿಗೆ..!

ನಂತರದಲ್ಲಿ ನಿಯಮಗಳೆಲ್ಲವೂ ಗಾಳಿಗೆ ತೂರಲ್ಪಟ್ಟಿತು. ಒಂದೊAದಾಗಿ ಖಾಸಗಿ ಜೀಪುಗಳು ರಸ್ತೆಗಿಳಿದವು. ಜೀಪುಗಳ ಸಂಖ್ಯೆ ಮತ್ತಷ್ಟು ಹೆಚ್ಚಿತು. ಪೈಪೋಟಿ ಆರಂಭವಾಯಿತು ಚಾಲಕರುಗಳೇ ತೀರ್ಮಾನಿಸಿಕೊಂಡAತೆ ಮೊದಲು ಬಂದವರಿಗೆ ಮೊದಲ ಟ್ರಿಪ್ ಎಂಬAತೆ ಸರತಿ ಸಾಲಿನಲ್ಲಿ ಜೀಪುಗಳನ್ನು ಓಡಿಸಲು ಆರಂಭಿಸಿದರು. ಆದರೆ ಹೆಚ್ಚಿಗೆ ಟ್ರಿಪ್ ಮಾಡುವ ಆಕಾಂಕ್ಷೆಯೊAದಿಗೆ ಚಾಲಕರಲ್ಲಿ ಪೈಪೋಟಿ ಆರಂಭಗೊAಡಿತು. ಜೀವನೋಪಾಯಕ್ಕಾಗಿ ಜೀಪ್ ಚಲಾಯಿಸುತ್ತಿರುವ ವಯಸ್ಸಾದವರೂ ಸೇರಿದಂತೆ ಕೆಲವರು ಇತಿ-ಮಿತಿಯೊಳಗೆ ಸಂಚರಿಸಿದರೆ ಯುವಕರಲ್ಲಿ ನಿಲ್ಲದ ಪೈಪೋಟಿ ಮುಂದುವರಿಯಿತು. ಇದರಿಂದಾಗಿ ಕಳೆದ ತಾ. ೨ ರಂದು ಎರಡು ಜೀಪುಗಳ ನಡುವೆ ಅವಘಡ ಸಂಭವಿಸಿ ಒಂದು ಜೀಪು ರಸ್ತೆಯ ಬದಿಯ ಮನೆಯ ಅಂಗಳಕ್ಕೆ ಜಿಗಿದರೆ ಮತ್ತೊಂದು ಜೀಪು ತೋಟದೊಳಕ್ಕೆ ನುಗ್ಗಿತ್ತು. ಸಂಭವಿಸಲಿದ್ದ ಪ್ರಾಣಾಪಾಯ ಸ್ವಲ್ಪದರಲ್ಲೇ ತಪ್ಪಿತ್ತು. ಗ್ರಾಮಸ್ಥರು ಇದರ ವಿರುದ್ಧ ತಿರುಗಿ ಬಿದ್ದಿದ್ದರು. ಜೀಪು ಸಂಚಾರ ನಿಷೇಧಿಸುವಂತೆ ಒತ್ತಾಯಿಸಿ, ಪ್ರತಿಭಟಿಸಿದ್ದರು.

ಸಂಚಾರ ಸ್ಥಗಿತ

ಈ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ದಿನೇಶ್‌ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರುಗಳು ಗ್ರಾಮಸ್ಥರು ಹಾಗೂ ಜೀಪು ಚಾಲಕರ ಸಭೆ ನಡೆಸಿ ಅನಧಿಕೃತ ಜೀಪುಗಳ ಸಂಚಾರದ ಬಗ್ಗೆ ಪ್ರಶ್ನಿಸಿ ಪೊಲೀಸ್ ಪಹರೆ ಹಾಕುವದಾಗಿ ಎಚ್ಚರಿಸಿದ್ದರು. ಅವಘಡವಾದ ತಕ್ಷಣದಿಂದಲೇ ಚಾಲಕರು ಜೀಪು ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಇದೀಗ ಮಾಂದಲ್‌ಪಟ್ಟಿಗೆ ಯಾವದೇ ಜೀಪ್‌ಗಳು ಸಂಚರಿಸುತ್ತಿಲ್ಲ.

ಪ್ರವಾಸಿಗರ ವಾಹನ

ಶನಿವಾರ ಹಾಗೂ ಭಾನುವರ ವಾರದ ಕೊನೆಯ ದಿನಗಳಾಗಿದ್ದರಿಂದ ಸಾಕಷ್ಟು ಪ್ರವಾಸಿಗರು ಆಗಮಿಸಿದ್ದರು. ಕೆಲವರು ತಮ್ಮ ವಾಹನಗಳಲ್ಲಿಯೇ ಮಾಂದಲ್‌ಪಟ್ಟಿ ಪ್ರವೇಶದ್ವಾರದವರೆಗೆ ತೆರಳಿ ಅಲ್ಲಿಂದಲೇ ಸೌಂದರ್ಯವನ್ನು ವೀಕ್ಷಿಸಿದರೆ; ಮತ್ತೆ ಕೆಲವರು ಕೆಲ ದೂರದವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಆಸ್ವಾದಿಸಿದ್ದಾರೆ. ಇನ್ನೂ ಕೆಲವರು ವಾಹನಗಳು ತೆರಳಲಾಗದು ಎಂಬ ಕೆಲವರ ಮಾತು ಕೇಳಿ ಅರ್ಧದಿಂದಲೇ ವಾಪಸ್ಸಾಗಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ

ಕಳೆದ ಮೂರು ದಿನಗಳಿಂದ ಜೀಪ್ ಸಂಚಾರವನ್ನು ಸ್ಥಗಿತಗೊಳಿಸಿರುವ ಚಾಲಕರುಗಳಿಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಅಹವಾಲು ಪೈಪೋಟಿ ಆರಂಭವಾಯಿತು ಚಾಲಕರುಗಳೇ ತೀರ್ಮಾನಿಸಿಕೊಂಡAತೆ ಮೊದಲು ಬಂದವರಿಗೆ ಮೊದಲ ಟ್ರಿಪ್ ಎಂಬAತೆ ಸರತಿ ಸಾಲಿನಲ್ಲಿ ಜೀಪುಗಳನ್ನು ಓಡಿಸಲು ಆರಂಭಿಸಿದರು. ಆದರೆ ಹೆಚ್ಚಿಗೆ ಟ್ರಿಪ್ ಮಾಡುವ ಆಕಾಂಕ್ಷೆಯೊAದಿಗೆ ಚಾಲಕರಲ್ಲಿ ಪೈಪೋಟಿ ಆರಂಭಗೊAಡಿತು. ಜೀವನೋಪಾಯಕ್ಕಾಗಿ ಜೀಪ್ ಚಲಾಯಿಸುತ್ತಿರುವ ವಯಸ್ಸಾದವರೂ ಸೇರಿದಂತೆ ಕೆಲವರು ಇತಿ-ಮಿತಿಯೊಳಗೆ ಸಂಚರಿಸಿದರೆ ಯುವಕರಲ್ಲಿ ನಿಲ್ಲದ ಪೈಪೋಟಿ ಮುಂದುವರಿಯಿತು. ಇದರಿಂದಾಗಿ ಕಳೆದ ತಾ. ೨ ರಂದು ಎರಡು ಜೀಪುಗಳ ನಡುವೆ ಅವಘಡ ಸಂಭವಿಸಿ ಒಂದು ಜೀಪು ರಸ್ತೆಯ ಬದಿಯ ಮನೆಯ ಅಂಗಳಕ್ಕೆ ಜಿಗಿದರೆ ಮತ್ತೊಂದು ಜೀಪು ತೋಟದೊಳಕ್ಕೆ ನುಗ್ಗಿತ್ತು. ಸಂಭವಿಸಲಿದ್ದ ಪ್ರಾಣಾಪಾಯ ಸ್ವಲ್ಪದರಲ್ಲೇ ತಪ್ಪಿತ್ತು. ಗ್ರಾಮಸ್ಥರು ಇದರ ವಿರುದ್ಧ ತಿರುಗಿ ಬಿದ್ದಿದ್ದರು. ಜೀಪು ಸಂಚಾರ ನಿಷೇಧಿಸುವಂತೆ ಒತ್ತಾಯಿಸಿ, ಪ್ರತಿಭಟಿಸಿದ್ದರು.

ಸಂಚಾರ ಸ್ಥಗಿತ

ಈ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ದಿನೇಶ್‌ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರುಗಳು ಗ್ರಾಮಸ್ಥರು ಹಾಗೂ ಜೀಪು ಚಾಲಕರ ಸಭೆ ನಡೆಸಿ ಅನಧಿಕೃತ ಜೀಪುಗಳ ಸಂಚಾರದ ಬಗ್ಗೆ ಪ್ರಶ್ನಿಸಿ ಪೊಲೀಸ್ ಪಹರೆ ಹಾಕುವದಾಗಿ ಎಚ್ಚರಿಸಿದ್ದರು. ಅವಘಡವಾದ ತಕ್ಷಣದಿಂದಲೇ ಚಾಲಕರು ಜೀಪು ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಇದೀಗ ಮಾಂದಲ್‌ಪಟ್ಟಿಗೆ ಯಾವದೇ ಜೀಪ್‌ಗಳು ಸಂಚರಿಸುತ್ತಿಲ್ಲ.

ಪ್ರವಾಸಿಗರ ವಾಹನ

ಶನಿವಾರ ಹಾಗೂ ಭಾನುವರ ವಾರದ ಕೊನೆಯ ದಿನಗಳಾಗಿದ್ದರಿಂದ ಸಾಕಷ್ಟು ಪ್ರವಾಸಿಗರು ಆಗಮಿಸಿದ್ದರು. ಕೆಲವರು ತಮ್ಮ ವಾಹನಗಳಲ್ಲಿಯೇ ಮಾಂದಲ್‌ಪಟ್ಟಿ ಪ್ರವೇಶದ್ವಾರದವರೆಗೆ ತೆರಳಿ ಅಲ್ಲಿಂದಲೇ ಸೌಂದರ್ಯವನ್ನು ವೀಕ್ಷಿಸಿದರೆ; ಮತ್ತೆ ಕೆಲವರು ಕೆಲ ದೂರದವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಆಸ್ವಾದಿಸಿದ್ದಾರೆ. ಇನ್ನೂ ಕೆಲವರು ವಾಹನಗಳು ತೆರಳಲಾಗದು ಎಂಬ ಕೆಲವರ ಮಾತು ಕೇಳಿ ಅರ್ಧದಿಂದಲೇ ವಾಪಸ್ಸಾಗಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ

ಕಳೆದ ಮೂರು ದಿನಗಳಿಂದ ಜೀಪ್ ಸಂಚಾರವನ್ನು ಸ್ಥಗಿತಗೊಳಿಸಿರುವ ಚಾಲಕರುಗಳಿಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಜೀಪು ಚಾಲನೆ ಮೂಲಕ ಹಲವಾರು ಮಂದಿಯ ಕುಟುಂಬ ನಿರ್ವಹಣೆಯಾಗುತ್ತಿದ್ದು; ಜೀಪು ಚಾಲಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ನಡುವೆ ದೇವಸ್ತೂರು, ನಿಡುವಟ್ಟು ಗ್ರಾಮಸ್ಥರು ಕೂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜೀಪುಗಳ ಪೈಪೋಟಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ಸಮಸ್ಯೆಗೆ ಕಾರಣಗಳೊಂದಿಗೆ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಿದ್ದಾರೆ. ಮಡಿಕೇರಿಯಿಂದ ಮಾಂದಲ್‌ಪಟ್ಟಿಗೆ ಸುಸಜ್ಜಿತ ರಸ್ತೆ ನಿರ್ಮಾಣ, ನಂದಿಮೊಟ್ಟೆಯಲ್ಲಿ ಅನಧಿಕೃತ ಜೀಪ್‌ಗಳ ನಿಲುಗಡೆಗೆ ಕಡಿವಾಣ ಹಾಕುವದು, ಬಿಳಿಬಣ್ಣ ನೋಂದಣಿ ಇರುವ ಜೀಪುಗಳಿಗೆ ಅವಕಾಶ ನೀಡಬಾರದು, ನಂದಿಮೊಟ್ಟೆಯಲ್ಲಿ ಪ್ರವಾಸಿ ವಾಹನಗಳ ನಿಲುಗಡೆಗೆ ಕಡಿವಾಣ ಹಾಕುವದು, ಕೆ. ನಿಡುಗಣೆ ಗ್ರಾ.ಪಂ.ನಿAದ ಯಾವದೇ ಕ್ರಮ ಕೈಗೊಳ್ಳದಿರುವದು, ಪ್ರವಾಸಿ ವಾಹನಗಳಿಗೆ ಯಾವದೇ ರಕ್ಷಣೆ ನೀಡದಿರುವದು, ಪ್ರವಾಸಿಗರಿಂದ ಸುಲಿಗೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವದು, ಮಡಿಕೇರಿಯಿಂದ ಮಾಂದಲ್‌ಪಟ್ಟಿಗೆ ೧೮ ಕಿ.ಮೀ. ರಸ್ತೆ ಸುಸಜ್ಜಿತವಾಗಿದೆ ಎಂಬ ಬಗ್ಗೆ ಪ್ರವಾಸಿಗರಲ್ಲಿ ಮಾಹಿತಿ ಹಾಗೂ ಮಾಧ್ಯಮಗಳ ಮೂಲಕ ಪ್ರಚಾರ ಪಡಿಸುವದು ಸೇರಿದಂತೆ ಇತರ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ತಾ. ೬ ರಂದು ಏರ್ಪಡಿಸಿರುವ ಸಭೆಗೆ ಆಗಮಿಸುವಂತೆ ಉಭಯ ಕಡೆಯವರಿಗೂ ಸೂಚನೆ ನೀಡಿ ಕಳುಹಿಸಿದ್ದಾರೆ.

ಪ್ರವಾಸಿಗರನ್ನು ಕರೆದೊಯ್ಯುವ ವಿಚಾರದಲ್ಲಿ ಆಗಾಗ್ಗೆ ಈ ರೀತಿಯ ಅಹಿತಕರ ಬೆಳವಣಿಗೆಗಳು ಏರ್ಪಡುತ್ತಿದ್ದು; ಪೊಲೀಸ್ ಠಾಣೆ, ಜಿಲ್ಲಾಡಳಿತದ ಅಂಗಳಕ್ಕೆ ರವಾನೆಯಾಗುತ್ತಿರುವದು ಜಿಲ್ಲೆಯ ಮಟ್ಟಿಗೆ ಕಪ್ಪು ಚುಕ್ಕೆಯಂತಾಗುತ್ತಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕಾದುದು ಅನಿವಾರ್ಯವಾಗಿದೆ ಎಂಬದು ನಾಗರಿಕರ ಅಭಿಪ್ರಾಯವಾಗಿದೆ. - ಕುಡೆಕಲ್ ಸಂತೋಷ್, ಚಿತ್ರ: ಲಕ್ಷಿö್ಮÃಶ್