ಮಡಿಕೇರಿ, ನ. ೪: ದಕ್ಷಿಣ ಕೊಡಗಿನ ನಲ್ಲೂರು ಗ್ರಾಮದ ಹೋಂಸ್ಟೇನಲ್ಲಿ ತಾ. ೨ ರಂದು ರಾತ್ರಿ ರೇವ್ ಪಾರ್ಟಿ ಸಂಘಟಿಸಿ, ಪ್ರವಾಸಿ ಮಂದಿಗೆ ಮೋಜು ಮಸ್ತಿಗೆ ಅವಕಾಶ ಕಲ್ಪಿಸಿದ್ದ ಮೂವರು ಆರೋಪಿಗಳನ್ನು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.ಅಲ್ಲಿನ ನಿವಾಸಿ ಹೋಂಸ್ಟೇ ಮಾಲೀಕ ಪಿ.ಎಂ. ವಿವೇಕ್ ಹಾಗೂ ಈ ಕೃತ್ಯಕ್ಕೆ ಸಹಕರಿಸಿರುವ ಹೈದರಾಬಾದ್ ಮೂಲದ ಎಲ್. ನಿತೀಶ್ ಹಾಗೂ ಬಿ. ಭರತ್ ಎಂಬವರನ್ನು ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ವೀರಾಜಪೇಟೆ
(ಮೊದಲ ಪುಟದಿಂದ) ಗ್ರಾಮಾಂತರ ಮತ್ತು ಪೊನ್ನಂಪೇಟೆ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಈ ಮೋಜಿನ ಪಾರ್ಟಿಯಲ್ಲಿ ಹೊರ ರಾಜ್ಯ ಹಾಗೂ ಇತರೆಡೆಯ ೧೫೪ ಮಂದಿ ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರಿಗೆ ಲಭಿಸಿದ್ದ ಖಚಿತ ಸುಳಿವಿನ ಮೇರೆಗೆ ಪೊಲೀಸ್ ಕಾರ್ಯಾಚರಣೆ ನಡೆಸುವದರೊಂದಿಗೆ ಕಾನೂನು ಕ್ರಮ ಜರುಗಿಸಲಾಗಿತ್ತು. ಇದೀಗ ಹಣ ಗಳಿಕೆಯ ಆಮಿಷಕ್ಕೆ ಒಳಗಾಗಿ ಮೋಜು-ಮಸ್ತಿಗೆ ಅವಕಾಶ ನೀಡಿದ್ದ ಹೋಂಸ್ಟೇ ಮಾಲೀಕ ಹಾಗೂ ಇನ್ನಿಬ್ಬರು ಆರೋಪಿಗಳು ಕಂಬಿ ಎಣಿಸುವಂತಾಗಿದೆ.ಕೊಡಗಿನಲ್ಲಿ ಅಕ್ರಮ ಹೋಂಸ್ಟೇಗಳೊAದಿಗೆ ಇಂತಹ ದಂಧೆ ನಡೆಸುವವರ ಬಗ್ಗೆ ಪೊಲೀಸ್ ಇಲಾಖೆಗೆ ಸುಳಿವು ನೀಡುವಂತೆ ಜಿಲ್ಲಾ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಸಲಹೆ ನೀಡಿದ್ದಾರೆ. ಅಲ್ಲದೆ ಅಂತಹವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುವದು ಎಂದು ಭರವಸೆ ನೀಡಿದ್ದಾರೆ.