ಸೋಮವಾರಪೇಟೆ, ನ.೪: ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳ ಸಭೆಯಲ್ಲಿ ಶಾಸಕರು ಮತ್ತು ಇತರ ಕೆಲವರ ನಡುವೆ ವಾಕ್ಸಮರ ನಡೆದಿದ್ದು, ಅಸಮಾಧಾನ ಸ್ಫೋಟಗೊಂಡ ಘಟನೆ ನಡೆದಿದೆ ಎನ್ನಲಾಗಿದೆ.ಇಲ್ಲಿನ ಜಾನಕಿ ಕನ್ವೆನ್‌ಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳ ಸಭೆಯಲ್ಲಿ ಕೆಲವರನ್ನು ಕಂಡು ಶಾಸಕರು ಕೆರಳಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಬಿಜೆಪಿ ತಾಲೂಕು ಅಧ್ಯಕ್ಷ ಕೋಮಾರಪ್ಪ ಅವರ ಅಧ್ಯಕ್ಷತೆಯಲ್ಲಿ ಆಯ್ದ ಪ್ರಮುಖರ ಸಭೆ ಆಯೋಜಿಸಲಾಗಿತ್ತು. ಒಟ್ಟು ೩೩ ಮಂದಿಗೆ ಮಾತ್ರ ಸಭೆಗೆ ಆಹ್ವಾನ ನೀಡಲಾಗಿತ್ತು. ಸೋಮವಾರಪೇಟೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಇರುವ ಆಕಾಂಕ್ಷಿಗಳ ಹೆಸರನ್ನು ಪಟ್ಟಿಮಾಡಿಕೊಳ್ಳುವ ಸಲುವಾಗಿ ಸಭೆ ಕರೆಯಲಾಗಿತ್ತು.

ಈ ಸಭೆಗೆ ಪಿ.ಡಿ. ಮೋಹನ್‌ದಾಸ್, ಹೆಚ್.ಕೆ. ಮಾದಪ್ಪ, ಮಹೇಶ್ ತಿಮ್ಮಯ್ಯ, ಡಿ.ಬಿ. ಧರ್ಮಪ್ಪ, ವೆಂಕಪ್ಪ ಅವರುಗಳು ಆಗಮಿಸುತ್ತಿದ್ದಂತೆ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿ, ಕಳೆದ ಎಂಎಲ್‌ಎ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು ಈ ಸಭೆಗೆ ಆಗಮಿಸುವ ಅವಶ್ಯಕತೆಯಿಲ್ಲ. ಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಓಡಾಟ ನಡೆಸಿದವರು ಇಂದು ಸಭೆಗೆ ಯಾಕೆ ಬಂದಿದ್ದಾರೆ. ಅವರನ್ನು ಹೊರ ಕಳುಹಿಸಿ ಎಂದು ಅಧ್ಯಕ್ಷರನ್ನು ಒತ್ತಾಯಿಸಿದರು ಎನ್ನಲಾಗಿದೆ.

ಈ ಸಂದರ್ಭ ಸಭೆಗೆ ಅಪೇಕ್ಷಿತರಲ್ಲದವರು ಸಭೆಯಿಂದ ಹೊರ ಹೋಗಬಹುದು ಎಂದು ಅಧ್ಯಕ್ಷರು ತಿಳಿಸಿದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಇದೇ ಸಂದರ್ಭ ಶಾಸಕರು, ಎಂಎಲ್‌ಎ ಚುನಾವಣೆಯಲ್ಲಿ ನನ್ನೆದುರಿಗೇ ಪಕ್ಷವಿರೋಧಿ ಚಟುವಟಿಕೆ ಮಾಡಿದ್ದಾರೆ.

(ಮೊದಲ ಪುಟದಿಂದ) ನನ್ನನ್ನು ಸೋಲಿಸಲು ಬೇರೆ ಪಕ್ಷದಿಂದ ಹಣ ಪಡೆದು ಹಂಚಿದ್ದಾರೆ. ಅಂತವರು ಸಭೆಗೆ ಯಾಕೆ ಬಂದಿದ್ದಾರೆ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು ಎನ್ನಲಾಗಿದೆ.

‘ಅವರುಗಳನ್ನು ಪಕ್ಷದಿಂದ ತೆಗೆದು ಹಾಕಿದ್ದೇವೆ’ ಎಂದು ಕೊಮಾರಪ್ಪ ಹೇಳಿದರೆ, ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಶ್, ‘ಅಧಿಕೃತ ವಾಗಿ ಅವರು ಗಳನ್ನು ಪಕ್ಷದಿಂದ ತೆಗೆದುಹಾಕಿಲ್ಲ. ತಾಲೂಕು ಸಮಿತಿಯ ಶಿಫಾರಸ್ಸಿಗೆ ಸಂಬAಧಿಸಿದAತೆ, ಅವರುಗಳಿಂದ ಲಿಖಿತ ಅಭಿಪ್ರಾಯ ಕೇಳಿದ್ದು, ‘ನಾವುಗಳು ಯಾವ ತಪ್ಪೂ ಮಾಡಿಲ್ಲ’ ಎಂದು ತಿಳಿಸಿದ್ದಾರೆ. ಇದನ್ನು ರಾಜ್ಯ ಸಮಿತಿಯ ಗಮನಕ್ಕೆ ತರಲಾಗಿದೆ. ಆ ಪ್ರಕ್ರಿಯೆ ಅಲ್ಲಿಗೇ ನಿಂತಿದೆ’ ಎಂದರು.

ಈ ಸಂದರ್ಭ ರವಿಕುಶಾಲಪ್ಪ ಅವರನ್ನು ಉದ್ದೇಶಿಸಿದ ಶಾಸಕರು, ನೀವೇ ಇವರನ್ನು ಕರೆಸಿರುವದು, ಚುನಾವಣೆಯಲ್ಲಿ ನಾವು ಪಟ್ಟ ನೋವು ನಿಮಗೆ ಅರ್ಥ ಆಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರವಿ ಕುಶಾಲಪ್ಪ, ನಾನು ಕರೆಸಿಲ್ಲ; ಈ ಹಿಂದೆ ಎಂಎಲ್‌ಸಿ ಚುನಾವಣೆಯಲ್ಲಿ ಎಸ್.ಜಿ. ಮೇದಪ್ಪ ಅವರಿಗೂ ನೋವಾಗಿತ್ತು. ಅದಕ್ಕೆ ಯಾವ ಕ್ರಮವಾಯಿತು? ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದರು.

ಇದಕ್ಕೆ ದನಿಗೂಡಿಸಿದ ಎಸ್.ಜಿ. ಮೇದಪ್ಪ, ನನಗೆ ನೋವಾದಾಗ ಯಾರೂ ಸ್ಪಂದನೆ ಮಾಡಲಿಲ್ಲ. ಅಂದೇ ಕ್ರಮವಾಗಿದ್ದರೆ ಇಂದು ಈ ರೀತಿಯ ಸಮಸ್ಯೆ ಬರುತ್ತಿರಲಿಲ್ಲ. ಕಳೆದ ಎಂಎಲ್‌ಎ ಚುನಾವಣೆಯಲ್ಲಿ ನಾವುಗಳು ಕೆಲಸ ಮಾಡಿದ್ದರೂ ಸಹ, ಕೆಲಸ ಮಾಡಲಿಲ್ಲ ಎಂದು ಬಿಂಬಿಸುವ ಯತ್ನ ನಡೆಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷ ಭಾರತೀಶ್ ಮಾತನಾಡಿ, ನಿಮ್ಮ ನೋವಿಗೆ ನೀವೇ ಅಂದು ನ್ಯಾಯ ತೆಗೆದುಕೊಳ್ಳಬೇಕಿತ್ತು. ಈಗ ಸರಿಪಡಿಸಲು ಸಾಧ್ಯವಿಲ್ಲ ಎಂದರು. ಮತ್ತೆ ಮಾತಿಗಿಳಿದ ಶಾಸಕರು, ಜಿ.ಪಂ. ಮಾಜೀ ಸದಸ್ಯ ವೆಂಕಪ್ಪ ಅವರನ್ನು ದ್ದೇಶಿಸಿ, ಕಳೆದ ಚುನಾವಣೆಯಲ್ಲಿ ಬಜೆಗುಂಡಿಯ ಬಳಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದನ್ನು ನಾನೇ ನೋಡಿದ್ದೇನೆ. ಅಂತವರೂ ಸಭೆಗೆ ಬಂದಿದ್ದಾರೆ ಎಂದರು. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ; ಯಾವದೇ ಪ್ರಮಾಣಕ್ಕೂ ಬರುತ್ತೇನೆ ಎಂದು ವೆಂಕಪ್ಪ ಹೇಳಿದರು.

ನಂತರ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದರು.

ಇದಕ್ಕೆ ದನಿಗೂಡಿಸಿದ ಎಸ್.ಜಿ. ಮೇದಪ್ಪ, ನನಗೆ ನೋವಾದಾಗ ಯಾರೂ ಸ್ಪಂದನೆ ಮಾಡಲಿಲ್ಲ. ಅಂದೇ ಕ್ರಮವಾಗಿದ್ದರೆ ಇಂದು ಈ ರೀತಿಯ ಸಮಸ್ಯೆ ಬರುತ್ತಿರಲಿಲ್ಲ. ಕಳೆದ ಎಂಎಲ್‌ಎ ಚುನಾವಣೆಯಲ್ಲಿ ನಾವುಗಳು ಕೆಲಸ ಮಾಡಿದ್ದರೂ ಸಹ, ಕೆಲಸ ಮಾಡಲಿಲ್ಲ ಎಂದು ಬಿಂಬಿಸುವ ಯತ್ನ ನಡೆಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷ ಭಾರತೀಶ್ ಮಾತನಾಡಿ, ನಿಮ್ಮ ನೋವಿಗೆ ನೀವೇ ಅಂದು ನ್ಯಾಯ ತೆಗೆದುಕೊಳ್ಳಬೇಕಿತ್ತು. ಈಗ ಸರಿಪಡಿಸಲು ಸಾಧ್ಯವಿಲ್ಲ ಎಂದರು. ಮತ್ತೆ ಮಾತಿಗಿಳಿದ ಶಾಸಕರು, ಜಿ.ಪಂ. ಮಾಜೀ ಸದಸ್ಯ ವೆಂಕಪ್ಪ ಅವರನ್ನು ದ್ದೇಶಿಸಿ, ಕಳೆದ ಚುನಾವಣೆಯಲ್ಲಿ ಬಜೆಗುಂಡಿಯ ಬಳಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದನ್ನು ನಾನೇ ನೋಡಿದ್ದೇನೆ. ಅಂತವರೂ ಸಭೆಗೆ ಬಂದಿದ್ದಾರೆ ಎಂದರು. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ; ಯಾವದೇ ಪ್ರಮಾಣಕ್ಕೂ ಬರುತ್ತೇನೆ ಎಂದು ವೆಂಕಪ್ಪ ಹೇಳಿದರು.

ನಂತರ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳ ಮಾದಪ್ಪ ಸಹ ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ರಂಜನ್ ಹೇಳುತ್ತಿದ್ದಂತೆ ಎದ್ದುನಿಂತ ಮಾದಪ್ಪ, ಕಳೆದ ಚುನಾವಣೆಯಲ್ಲಿ ನಿಮ್ಮ ಪರ ಕೆಲಸ ಮಾಡುವದಿಲ್ಲ ಎಂದು ನೇರವಾಗಿಯೇ ತಿಳಿಸಿದ್ದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಯಾವದೇ ಪ್ರಮಾಣಕ್ಕಾದರೂ ಬರುತ್ತೇನೆ ಎಂದರು. ಈ ಸಂದರ್ಭ ಮತ್ತೆ ಮಾತಿನ ಗೊಂದಲ ಉಂಟಾಯಿತು.

ಒಟ್ಟಾರೆ ಶಿಸ್ತಿನ ಪಕ್ಷವೆಂದೇ ಕರೆದುಕೊಳ್ಳುವ ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಭೆಯಲ್ಲಿ ಶಾಸಕರು ಮತ್ತು ಇತರರ ನಡುವಿನ ಭಿನ್ನಾಭಿಪ್ರಾಯ ಸ್ಫೋಟಗೊಂಡು, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬದು ಇತರರಿಗೆ ಮನವರಿಕೆಯಾಯಿತು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ಯುವ ಮೋರ್ಚಾ ಅಧ್ಯಕ್ಷ ಸುನಿಲ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.