ಗೋಣಿಕೊಪ್ಪ ವರದಿ, ನ. 1: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಪುರುಷರ ಬಿ. ಡಿವಿಜನ್ ಹಾಕಿ ಲೀಗ್ನ ತಲಾ ಮೂರು ಪಂದ್ಯಗಳು, ಜಯ ಮತ್ತು ಡ್ರಾ ಫಲಿತಾಂಶ ಕಂಡಿತು.
ಕೂಡಿಗೆ ಕ್ರೀಡಾ ಶಾಲೆ ಹಾಗೂ ಎಸ್ಆರ್ಸಿ ಕಾಕೋಟುಪರಂಬು, ಬೇತು ಯೂತ್ ಕ್ಲಬ್ ಹಾಗೂ ವೀರಾಜಪೇಟೆ ಎಫ್ಎಂಸಿ, ಮತ್ತು ಕಿರುಗೂರು ಹಾಗೂ ವೀರಾಜಪೇಟೆ ಕೊಡವ ಸಮಾಜ ತಂಡಗಳ ನಡುವಿನ ಪಂದ್ಯ ರೋಚಕ ಡ್ರಾ ಫಲಿತಾಂಶ ನೀಡದವು. ಉಳಿದಂತೆ ಸೋಮವಾರಪೇಟೆ ಡಾಲ್ಪಿನ್ಸ್, ಮಲೆನಾಡ್ ಮತ್ತು ಜನರಲ್ ತಿಮ್ಮಯ್ಯ ಅಕಾಡೆಮಿ ತಂಡಗಳು ಗೆಲವಿನ ನಗೆ ಬೀರಿದವು
ಡ್ರಾದಲ್ಲಿ ಅಂತ್ಯ: ಕೂಡಿಗೆ ಕ್ರೀಡಾ ಶಾಲೆ ಹಾಗೂ ಎಸ್ಆರ್ಸಿ ಕಾಕೋಟುಪರಂಬು ತಂಡಗಳ ನಡುವಿನ ಪಂದ್ಯ 1-1 ಗೋಲುಗಳ ಮೂಲಕ ಡ್ರಾ ಫಲಿತಾಂಶ ಕಂಡಿತು. ಕೂಡಿಗೆ ಪರ 9 ನೇ ನಿಮಿಷದಲ್ಲಿ ಪೊನ್ನಣ್ಣ, ಕಾಕೋಟುಪರಂಬು ಪರ 3 ನೇ ನಿಮಿಷದಲ್ಲಿ ಅಚ್ಚಯ್ಯ ಗೋಲು ಹೊಡೆದರು.
ಬೇತು ಯೂತ್ ಕ್ಲಬ್ ಹಾಗೂ ವೀರಾಜಪೇಟೆ ಎಫ್ಎಂಸಿ ತಂಡಗಳ ಪಂದ್ಯ ಕೂಡ 1-1 ಗೋಲುಗಳಿಂದ ಡ್ರಾ ಆಯಿತು. ಬೇತು ಪರವಾಗಿ 5 ನೇ ನಿಮಿಷದಲ್ಲಿ ಪ್ರಶುಲ್, ವೀರಾಜಪೇಟೆ ಪರ 6 ನೇ ನಿಮಿಷದಲ್ಲಿ ಕುಮಾರ್ ಗೋಲು ಹೊಡೆದರು.
ಕಿರುಗೂರು ಹಾಗೂ ವೀರಾಜಪೇಟೆ ಕೊಡವ ಸಮಾಜ ತಂಡಗಳ ಪಂದ್ಯ 1-1 ಗೋಲುಗಳ ಡ್ರಾ ಫಲಿತಾಂಶ ನೀಡಿತು. ಕಿರುಗೂರು ಪರ 26 ನೇ ನಿಮಿಷದಲ್ಲಿ ಸೋಮಣ್ಣ, ಕೊಡವ ಸಮಾಜ ಪರ 2 ನೇ ನಿಮಿಷದಲ್ಲಿ ಸುದರ್ಶನ್ ಗೋಲು ಬಾರಿಸಿದರು.
ಗೆಲುವು : ಸೋಮವಾರಪೇಟೆ ಡಾಲ್ಪಿನ್ಸ್ ತಂಡವು 2-0 ಗೋಲುಗಳ ಮೂಲಕ ಪೆರೂರಿಯನ್ಸ್ ವಿರುದ್ದ ಜಯ ಗಳಿಸಿತು. ಡಾಲ್ಫಿನ್ಸ್ ಪರ 5 ನೇ ನಿಮಿಷದಲ್ಲಿ ಕಾಳಿಮುತ್ತು, 23 ನೇ ನಿಮಿಷದಲ್ಲಿ ಎಂ. ಆಶಿತ್ ತಲಾ ಒಂದೊಂದು ಗೋಲು ಹೊಡೆದರು.
ಮಲೆನಾಡ್ ತಂಡವು ಕೂಡಿಗೆ ಕ್ರೀಡಾ ಶಾಲೆ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಮಲೆನಾಡ್ ಪರ 12 ಹಾಗೂ 15 ನಿಮಿಷಗಳಲ್ಲಿ ಶಿಯಾನ್ ಜೋಡಿ ಗೋಲು ಹೊಡೆದು ಮಿಂಚಿದರು. ಕೂಡಿಗೆ ಪರ 23 ನೇ ನಿಮಿಷದಲ್ಲಿ ಕುಮಾರ್ ಏಕೈಕ ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು.
ಜನರಲ್ ತಿಮ್ಮಯ್ಯ ಅಕಾಡೆಮಿ ತಂಡವು ಶ್ರೀಮಂಗಲ ಕೊಡವ ಸಮಾಜ ವಿರುದ್ದ 2-1 ಗೋಲುಗಳ ಜಯ ಕಂಡಿತು. ಜನರಲ್ ತಿಮ್ಮಯ್ಯ ಪರವಾಗಿ 16 ನೇ ನಿಮಿಷದಲ್ಲಿ ಪ್ರಜ್ವಲ್, 29 ರಲ್ಲಿ ಕರುಂಬಯ್ಯ, ಶ್ರೀಮಂಗಲ ಪರ 27 ನೇ ನಿಮಿಷದಲ್ಲಿ ಸೂರಜ್ ಗೋಲು ಹೊಡೆದರು.