ಮಡಿಕೇರಿ, ನ. 1 : 1990 ನವೆಂಬರ್ ತಿಂಗಳಲ್ಲಿ ಅಯೋಧ್ಯೆಯಲ್ಲಿನ ರಾಮಜನ್ಮ ಭೂಮಿಯಲ್ಲಿ ನಡೆದ ಕರಸೇವೆಯಲ್ಲಿ ಹುತಾತ್ಮರಾದ ರಾಮ್ ಮತ್ತು ಶರದ್ ಕೊಠಾರಿ ಸಹೋದರರ ನೆನೆಯುವ ಬಲಿದಾನ ದಿವಸ್ ತಾ. 2 ರಂದು (ಇಂದು) ನಡೆಯಲಿದೆ. ಪ್ರತಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕೊಡಗು ಜಿಲ್ಲೆ ನೇತೃತ್ವದಲ್ಲಿ ನಗರದ ಭಾರತೀಯ ವಿದ್ಯಾ ಭವನದ ಸಭಾಂಗಣದಲ್ಲಿ ಬೆಳಿಗ್ಗೆ 10 ಘಂಟೆಗೆ ಸಭಾ ಕಾರ್ಯಕ್ರಮ ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ನಡೆಯಲಿದೆ ಎಂದು ವಿ.ಹಿ.ಪ. ಭಜರಂಗದಳ ಘಟಕಗಳ ಪ್ರಕಟಣೆ ತಿಳಿಸಿದೆ.