*ಗೋಣಿಕೊಪ್ಪಲು, ನ. ೨: ಜಿಲ್ಲಾಮಟ್ಟದ ಯುವ ಜನೋತ್ಸವ ಸ್ಪರ್ಧೆಯಲ್ಲಿ ಶಾಸ್ತಿçÃಯ ಮೃದಂಗ, ಗಾಯನ ಮತ್ತು ತಬಲ ವಾದನದ ಮೂರು ವಿಭಾಗದಲ್ಲಿ ಚಂದನ್ ನೆಲ್ಲಿತ್ತಾಯ ಹಾಗೂ ಗಿಟಾರ್ ವಾದನದಲ್ಲಿ ದೀಕ್ಷಿತ್ ನೆಲ್ಲಿತ್ತಾಯ ಇವರುಗಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಸೋಮವಾರಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಿದ ಯುವ ಜನೋತ್ಸವದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆ ನಿವಾಸಿ ಶ್ರೀಧರ್ ನೆಲ್ಲಿತ್ತಾಯ ಹಾಗೂ ರೇಖಾ ಶ್ರೀದರ್ ದಂಪತಿಗಳ ಮಕ್ಕಳಾಗಿರುವ ಇವರು ರಾಷ್ಟç ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಖ್ಯಾತ ಗಿಟಾರ್ ವಾದಕ ಕುಂಪುಳಿರ ಶಶಿಧರ್ ಅವರ ಶಿಷ್ಯ ದೀಕ್ಷಿತ್ ನೆಲ್ಲಿತ್ತಾಯ ಬೆಂಗಳೂರಿನಲ್ಲಿ ಎಂ.ಬಿ.ಎ. ಮಾಡುತ್ತಿದ್ದು, ಚಂದನ್ ನೆಲ್ಲಿತ್ತಾಯ ಮೈಸೂರಿನ ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿಯಲ್ಲಿ ಮ್ಯೂಸಿಕ್ ಡಿಪ್ಲೋಮೊ ಮಾಡುತ್ತಿದ್ದಾರೆ.