ಮಡಿಕೇರಿ, ನ. ೨: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ವಿಶೇಷ ಘಟಕ ಯೋಜನೆ ಅಡಿ ಗುರು-ಶಿಷ್ಯ ಪರಂಪರೆ ಕಾರ್ಯಕ್ರಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಎ.ಬಿ. ಮಾಧವ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮದೆ ಮಹೇಶ್ವರ ಪ್ರೌಢಶಾಲೆಯ ಶಿಕ್ಷಕಿ ಕೆ.ಎಸ್. ದಮಯಂತಿ, ಯಕ್ಷಗಾನ ಒಂದು ಉತ್ತಮ ಜಾನಪದ ಕಲೆ. ಅದನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹಿಸುತ್ತಿರುವ ಇಲಾಖೆಯ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಶುಭ ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದರ್ಶನ ಕೆ.ಟಿ. ಮಾತನಾಡಿ, ಇಲಾಖೆಯ ಹಲವಾರು ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರಿಸಿ ಶಿಬಿರಾ ರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಶಾಲೆಯ ೭ನೇ ತರಗತಿಯ ಜಶ್ಮಿತಾ ಎ.ಎಂ., ಚೈತ್ರಾ ಎ.ಎಂ, ಜಾನ್ಸಿ ಕೆ.ವಿ. ಅವರು ಪ್ರಾರ್ಥಿಸಿದರು. ಶಿಕ್ಷಕಿ ಅಮರಾವತಿ ಸ್ವಾಗತಿಸಿ, ವಂದಿಸಿದರು.