ಸಿದ್ದಾಪುರ, ನ. ೨: ಅರೆಕಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ (ಐದ್ರೋಡಮ್ಮ) ದೇವಾಲಯದ ೧೧ನೇ ವರ್ಷದ ವಾರ್ಷಿಕ ಉತ್ಸವ ವಿಜೃಂಭಣೆಯಿAದ ನಡೆಯಿತು. ಅರೆಕಾಡು ಗ್ರಾಮದ ಬಲಂಜಿಕೆರೆಯ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಎರಡು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಹಾಪೂಜೆ, ತೀರ್ಥ-ಪ್ರಸಾದ ವಿತರಣೆ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.