ಮಡಿಕೇರಿ, ನ. ೨: ೨೯ ವರ್ಷಗಳ ಹಿಂದೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜರುಗಿದ ಐತಿಹಾಸಿಕ ಕಾರಸೇವೆಯ ಸಂದರ್ಭ ಬಲಿದಾನ ಗೈದವರಿಗೆ ಶ್ರದ್ಧಾಂಜಲಿಯೊAದಿಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದಿAದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಜರುಗಿದ ಸಭಾ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿ ಡಾ. ಕರುಂಬಯ್ಯ ಅವರು ಚಾಲನೆ ನೀಡಿದರು.

ರಕ್ತದಾನದ ಮಹತ್ವ ಕುರಿತು ಮಾತನಾಡಿದ ಅವರು, ಅನೇಕ ಸಂದರ್ಭಗಳಲ್ಲಿ ಬೇರೆ ಬೇರೆ ಕಾಯಿಲೆಗಳಿಗೆ ಸಿಲುಕಿ ರಕ್ತ ಹೀನತೆಯಿಂದ ಬಳಲುವವರು, ಅಪಘಾತ ಇನ್ನಿತರ ಸಂದರ್ಭ ತುರ್ತು ರಕ್ತಕ್ಕಾಗಿ ಪರಿತಪಿಸುವವರಿಗೆ ಸ್ವಯಂ ಪ್ರೇರಿತ ರಕ್ತದಾನದಿಂದ ಪ್ರಾಣ ಉಳಿಸಲು ಸಾಧ್ಯವಾಗಲಿದೆ ಎಂದು ನೆನಪಿಸಿದರು.

ಈ ದಿಸೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಆಶ್ರಯದಲ್ಲಿ ಬಜರಂಗದಳದ ಕಾರ್ಯಕರ್ತರು ಕಾರ್ಗಿಲ್ ವಿಜಯ ದಿವಸ ಮತ್ತು ಅಯೋಧ್ಯಾ ಬಲಿದಾನ ದಿನದ ನೆನಪಿನಲ್ಲಿ ಸ್ವಯಂ ಪ್ರೇರಿತರಾಗಿ ಶಿಬಿರ ಆಯೋಜಿಸಿ ರಕ್ತದಾನ ಗೈಯ್ಯುತ್ತಿರುವದು ಅತ್ಯಂತ ಶ್ಲಾಘನೀಯ ಎಂದು ಡಾ. ಕರುಂಬಯ್ಯ ನುಡಿದರು.

ಒಂದೊಮ್ಮೆ ಯಾರಿಗಾದರೂ ತುರ್ತು ರಕ್ತ ಬೇಕೆನಿಸಿದರೆ ದುಬಾರಿ ಹಣ ನೀಡಿ ಖರೀದಿಸಬೇಕಿತ್ತು. ಇತ್ತೀಚಿನ ವರ್ಷಗಳಲ್ಲಿ ಸಂಘ ಸಂಸ್ಥೆಗಳ ಮೂಲಕ ಸಮಾಜದಲ್ಲಿ ಜಾಗೃತಿಯೊಂದಿಗೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಾ, ನೊಂದವರ ಪ್ರಾಣ ರಕ್ಷಿಸುತ್ತಿರುವದು ಮಹತ್ವದ ಸೇವೆಯಾಗಿದೆ ಎಂದು ಪ್ರಶಂಸೆಯ ಮಾತನಾಡಿದರು.

ಈ ಸಂಬAಧ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಬಜರಂಗದಳ ಯುವಕರ ಹೆಸರುಗಳನ್ನು ನೋಂದಾಯಿಸಿ ಕೊಳ್ಳಲು ಸಲಹೆ ನೀಡಿದ ಅವರು, ಸಮಾಜದ ಯಾರೇ ಆದರೂ ಆರೋಗ್ಯವಂತರಿದ್ದರೆ ೧೮ ವರ್ಷದಿಂದ ೬೫ ವರ್ಷ ತನಕ ಪ್ರತಿ ೩ ತಿಂಗಳಿಗೊಮ್ಮೆ ರಕ್ತದಾನ ನೀಡಬಹುದೆಂದು ಮನವರಿಕೆ ಮಾಡಿದರು. ಅಲ್ಲದೆ, ಕಷ್ಟದಲ್ಲಿರುವವರಿಗೆ ಯಾವ ಗುಂಪಿನ ರಕ್ತ ಬೇಕೆಂದು ಪರೀಕ್ಷಿಸಿ, ಅಂತಹ ಸಂಸ್ಕರಿಸಿದ ರಕ್ತವನ್ನು ಒದಗಿಸುವ ಇಂಗಿತ ವ್ಯಕ್ತಪಡಿಸಿದರು.

ಅವಶ್ಯಕತೆಗೆ ತಕ್ಕಂತೆ ೨೦ಕ್ಕೂ ಅಧಿಕ ಯುವಕರಿಂದ ರಕ್ತದಾನ ಪಡೆದು, ಮಿಕ್ಕವರ ಹೆಸರು ನೋಂದಾಯಿಸಿಕೊAಡು ತುರ್ತು ಸಂದರ್ಭ ಸಂಪರ್ಕಿಸಲಾಗುವದು ಎಂದು ಭರವಸೆ ನೀಡಿದರು.

ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಎಂ.ಎA. ಬೋಪಯ್ಯ ಹಾಗೂ ಪತ್ರಕರ್ತ ಚಿ.ನಾ. ಸೋಮೇಶ್ ಕಾರ್ಯಕ್ರಮದ ಮಹತ್ವ ವಿವರಿಸಿದರು. ಬಜರಂಗದಳ ಜಿಲ್ಲಾ ಸಂಚಾಲಕ ಕೆ.ಹೆಚ್. ಚೇತನ್, ಬಿಜೆಪಿ ಹಾಗೂ ಸಂಘ ಪರಿವಾರದ ಪ್ರಮುಖರಾದ ಉಡೋತ್ ಚಂದ್ರ, ಕೆ.ಕೆ. ಮಹೇಶ್ ಕುಮಾರ್, ಮಹೇಶ್ ಜೈನಿ, ಅನಿತಾ ಪೂವಯ್ಯ, ಬಿ.ಎಸ್. ಲಿಂಗಪ್ಪ, ಕೆ.ಎನ್. ಕುಶಾಲಪ್ಪ, ಮನು ಮಂಜುನಾಥ್, ಮನುಕುಮಾರ್, ಪಿ.ಜಿ. ಸುಕುಮಾರ್, ಜಯಕುಮಾರ್, ಜಗದೀಶ್, ಉಮೇಶ್ ಸುಬ್ರಮಣಿ ಸೇರಿದಂತೆ ಹೆಚ್ಚಿನ ಯುವಕರು ಹಾಜರಿದ್ದರು. ಸಂಘಟನೆಯ ಪ್ರಮುಖರಾದ ವಿನಯ್‌ಕುಮಾರ್ ನಿರೂಪಿಸಿ, ಚರಣ್ ವಂದಿಸಿದರು.