ಸೋಮವಾರಪೇಟೆ, ನ.೨: ಸೋಮವಾರಪೇಟೆ ತಾಲೂಕಿನಿಂದ ಕುಶಾಲನಗರವನ್ನು ಕೇಂದ್ರವಾಗಿಟ್ಟು ಕೊಂಡು ನೂತನವಾಗಿ ಕಾವೇರಿ ತಾಲೂಕು ರಚನೆಯಾಗುತ್ತಿರುವದ ರಿಂದ ಸೋಮವಾರಪೇಟೆಗೆ ನ್ಯಾಯೋಚಿತವಾಗಿ ಲಭಿಸಬೇಕಾದ ಸೌಲಭ್ಯಗಳನ್ನು ಹೊಂದಿಕೊಳ್ಳಲು ನೂತನವಾಗಿ ಸಮಿತಿ ರಚಿಸಲು ನಿರ್ಧರಿಸಲಾಯಿತು.

ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಗಳನ್ನು ಸಿದ್ಧಪಡಿಸಲು ತೀರ್ಮಾನಿಸ ಲಾಯಿತು.

ಸೋಮವಾರಪೇಟೆಯಿಂದ ಕುಶಾಲನಗರ ಬೇರ್ಪಡುತ್ತಿರುವ ಹಿನ್ನೆಲೆ ಹಲವಷ್ಟು ಇಲಾಖೆಗಳು, ಗ್ರಾಮಗಳು ಹೊರಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಸೋಮವಾರ ಪೇಟೆ ಇನ್ನಷ್ಟು ಕುಗ್ರಾಮವಾಗಿಯೇ ಉಳಿಯಲಿದೆ. ಈ ಹಿನ್ನೆಲೆ ತಕ್ಷಣ ಸರ್ಕಾರದ ಗಮನ ಸೆಳೆದು ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುವಂತೆ ನಿರ್ಧರಿಸಲಾಯಿತು.

ಈ ಸಂಬAಧಿತ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿ ನಂತರದ ಸಭೆಗೆ ಎಲ್ಲಾ ಜನಪ್ರತಿನಿಧಿ ಗಳನ್ನು ಆಹ್ವಾನಿಸುವಂತೆ ಸಭೆ ತೀರ್ಮಾನಿಸಿತು.

ಪ್ರಥಮವಾಗಿ ಸೋಮವಾರಪೇಟೆ ಯಿಂದ ಹೊರಹೋಗುವ ಗ್ರಾಮಗಳ ಪಟ್ಟಿ, ಗಡಿಯ ಬಗ್ಗೆ ಉಪ ವಿಭಾಗಾಧಿಕಾರಿಯಿಂದ ಮಾಹಿತಿ ಪಡೆಯುವದು, ಸೋಮವಾರಪೇಟೆಗೆ ಸೇರಲು ಇಚ್ಚಿಸುವ ಗ್ರಾಮಗಳ ಗ್ರಾಮಸ್ಥರಿಂದ ಅಭಿಪ್ರಾಯ ಸಂಗ್ರಹಿಸುವ ಬಗ್ಗೆ ಸಭೆಯಲ್ಲಿದ್ದ ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಸೇರಿದಂತೆ ಇತರರು ಸಲಹೆ ನೀಡಿದರು.

ಈಗಾಗಲೇ ಪೊಲೀಸ್ ಉಪಾಧೀಕ್ಷಕರ ಕಚೇರಿ, ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಸೈನಿಕ ಶಾಲೆ, ಇಂಜಿನಿಯ ರಿಂಗ್ ಕಾಲೇಜು, ಹಲವಷ್ಟು ಪ್ರವಾಸಿ ತಾಣಗಳು ನೂತನ ತಾಲೂಕಿಗೆ ಸೇರ್ಪಡೆಗೊಳ್ಳುತ್ತಿದ್ದು, ಸೋಮವಾರ ಪೇಟೆಗೆ ಭಾರೀ ಹಿನ್ನಡೆಯಾಗಲಿದೆ. ಈಗಾಗಲೇ ವ್ಯಾಪಾರ ವಹಿವಾಟು ನೆಲಕಚ್ಚಿದ್ದು, ಜನಜೀವನವೂ ದುಸ್ತರವಾಗುತ್ತಿದೆ. ಜನಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗುತ್ತಿದೆ. ಹೀಗೆಯೇ ಮುಂದುವರೆದರೆ ಇನ್ನಷ್ಟು ಹಿನ್ನಡೆಯಾಗುವ ಸಂಭವವಿದ್ದು, ಒಟ್ಟಾರೆ ಸೋಮವಾರಪೇಟೆ ತಾಲೂಕಿನ ಅಭಿವೃದ್ದಿಗೆ ಸಮಿತಿಯು ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಭೆಯಲ್ಲಿದ್ದವರು ಅಭಿಪ್ರಾಯಿಸಿದರು.

ಸಮಿತಿಯಲ್ಲಿ ಯಾವದೇ ರಾಜಕೀಯವನ್ನು ತರಬಾರದು. ರಾಜಕೀಯ ರಹಿತವಾಗಿ ಕಾರ್ಯ ನಿರ್ವಹಿಸಬೇಕು ಎಂಬ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪದಾಧಿಕಾರಿಗಳನ್ನು ಒಳಗೊಂಡAತೆ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಸಮಿತಿಯನ್ನು ತಾತ್ಕಾಲಿಕವಾಗಿ ರಚಿಸಲಾಯಿತು.

ಅಧ್ಯಕ್ಷರಾಗಿ ಅಭಿಮನ್ಯುಕುಮಾರ್, ಸಂಚಾಲಕರಾಗಿ ಎಸ್.ಮಹೇಶ್, ಉಪಾಧ್ಯಕ್ಷರುಗಳಾಗಿ ಎಸ್.ಎಂ. ಡಿಸಿಲ್ವಾ, ಬಿ.ಎಸ್. ಮಂಜುನಾಥ್, ಬಿ.ಬಿ. ಸತೀಶ್, ಪ್ರಧಾನ ಕಾರ್ಯ ದರ್ಶಿಯಾಗಿ ಕೆ.ಎನ್. ದೀಪಕ್, ಕಾರ್ಯದರ್ಶಿಗಳಾಗಿ ಸೋಮೇಶ್, ದಿನೇಶ್, ಅಶ್ವಿನಿ ಕೃಷ್ಣಕಾಂತ್, ಸಂಘಟನಾ ಕಾರ್ಯದರ್ಶಿಯಾಗಿ ಕಿಬ್ಬೆಟ್ಟ ಮಧು, ಖಜಾಂಚಿಯಾಗಿ ಮುರುಳೀಧರ್ ಅವರುಗಳನ್ನು ನೇಮಿಸಲಾಯಿತು. ಮುಂದಿನ ಸಭೆಗೆ ಎಲ್ಲಾ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳನ್ನು ಆಹ್ವಾನಿಸುವಂತೆ ತೀರ್ಮಾನಿಸಲಾಯಿತು.