ಸುಂಟಿಕೊಪ್ಪ, ಅ. 31: ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ 1991-92ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ಸವಿನೆನಪುಗಳನ್ನು ಮೆಲುಕು ಹಾಕುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಕಂಡರು.
ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ 1991-92ನೇ ಸಾಲಿನ ವಿದ್ಯಾರ್ಥಿಗಳು ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ 36 ಅಧಿಕ ವಿದ್ಯಾರ್ಥಿಗಳು ಒಗ್ಗೂಡಿಕೊಂಡು ಪ್ರಥಮ ವರ್ಷದ ಸಮ್ಮಿಲನ ಆಚರಣೆಯ ಅಂಗವಾಗಿ ಶಾಲಾ ದಿನಗಳಲ್ಲಿ ಆಟವಾಡಿದಂತಹ ವಿವಿಧ ಕ್ರೀಡೆಗಳನ್ನಾಡಿ, ತಿಂಡಿ ತಿನ್ನಿಸುಗಳನ್ನು ತಂದು ಹಂಚಿ ತಿನ್ನುವ ಮೂಲಕ ತಮ್ಮ ಬಾಲ್ಯ ದಿನದ ಸವಿನೆನಪುಗಳನ್ನು ಮೆಲುಕು ಹಾಕಿಕೊಂಡರು.
ವೇದಿಕೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಪ್ರತಿನಿಧಿ ಎಸ್.ಪಿ. ಸಂದೀಪ್‍ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ 1991-92ನೇ ಸಾಲಿನ ವಿದ್ಯಾರ್ಥಿಗಳಿಂದ ವಾರ್ಷಿಕ ಕಾರ್ಯಕ್ರಮ ಶಾಲೆಯ ಅಭಿವೃದ್ಧಿಗೆ ಕೊಡುಗೆ, ಮುಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಘಟನೆವತಿಯಿಂದ ನಿರ್ಧರಿಸಲಾಯಿತು.