ಸುಂಟಿಕೊಪ್ಪ, ಅ. 31: ಇಲ್ಲಿಗೆ ಸಮೀಪದ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ಕೆಡಿಪಿ ಸಭೆಯು ಗ್ರಾಮ ಪಂಚಾಯಿತಿ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಎಂ.ಎಂ. ಸುಮಲತಾ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸುಮಲತಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯ ಮತ್ತು ಕುಂದುಕೊರತೆಗಳ ಬಗ್ಗೆ ಮಾಹಿತಿ ನೀಡುವಂತೆ ಸಭೆಗೆ ತಿಳಿಸಿದರು. ಈ ಸಂದರ್ಭ 2ನೇ ವಿಭಾಗದ ಅಂಗನವಾಡಿ ಕಾರ್ಯಕರ್ತೆ ಬಿಂದು ಮಾತನಾಡಿ 2ನೇ ವಿಭಾಗದಲ್ಲಿ 1700 ಜನ ಸಂಖ್ಯೆಯಿದ್ದು, ಇಲ್ಲಿಗೆ ಇನ್ನೊಂದು ಅಂಗನವಾಡಿ ನಿರ್ಮಿಸಿ ಕೊಡುವಂತೆ ಬೇಡಿಕೆಯಿತ್ತರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆÀ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವದು ಎಂದರು. ಅರಣ್ಯ ಇಲಾಖೆ ಅಧಿಕಾರಿ ಮಾದವ ನಾಯ್ಕ ಮಾತನಾಡಿ, ಈಗಾಗಲೇ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕಾಡಾನೆ ನಿಯಂತ್ರಣಕ್ಕೆ 6 ಕೀ.ಮೀ. ಉದ್ದದ ಸೋಲಾರ್ ಬೇಲಿ ಅಳವಡಿಸಲಾಗಿದೆ. ಆದರೂ ಆನೆಗಳು ಅದನ್ನು ತುಂಡರಿಸಿ ನಾಡಿಗೆ ದಾಳಿ ಮಾಡುತ್ತಿವೆ. ಇದಕ್ಕೆ ಇನ್ನೂ ಹೆಚ್ಚಿನ ಸಾಮಥ್ರ್ಯದ ಬೇಲಿ ಅಳವಡಿಸುವ ಬಗ್ಗೆ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವದು ಎಂದರು.

ಉಪಾಧ್ಯಕ್ಷ ಕೆ.ಎಂ. ಮುಸ್ತಾಫ, ಪಿಡಿಓ ಅಸ್ಮ, ಸದಸ್ಯ ರಮೇಶ ಮಾತನಾಡಿ, ಕಂಬಿಬಾಣೆ ರಸ್ತೆಯಲ್ಲಿ ದ್ವಿಚಕ್ರ ಸವಾರರು ಕರ್ಕಶ ಶಬ್ದದೊಂದಿಗೆ ಅತೀ ವೇಗವಾಗಿ ವಾಹನ ಚಲಾಯಿ ಸುತ್ತಿದ್ದಾರೆ ಮತ್ತು ಸರಕಾರಿ ಶಾಲೆಯ ಆವರಣದಲ್ಲಿ ರಾತ್ರಿ ವೇಳೆ ಪುಂಡ ಪೋಕರಿಗಳು ಮದ್ಯಪಾನ ಮಾಡಿ ಎಲ್ಲೆಂದರಲ್ಲಿ ಬ್ರಾಂದಿ ಬಿಯರ್ ಬಾಟಲಿಗಳನ್ನು ಎಸೆಯುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆÉಯನ್ನು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸುಂಟಿಕೊಪ್ಪ ಎಎಸ್‍ಐ ಈರಪ್ಪ ಈಗಾಗಲೇ ರಾತ್ರಿ ವೇಳೆ ಈ ಭಾಗದಲ್ಲಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದರು. ಗ್ರಾಮ ಲೆಕ್ಕಾಧಿಕಾರಿ ನಸೀಮ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆ ಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಪಿ. ರಮೇಶ, ಕೆ.ಎ. ಉಮೇಶ, ಇ.ಬಿ. ಜಫಸೆಫ್, ಕೆ.ಎ. ಅಬ್ದುಲ್ಲ, ಪಿ.ಬಿ. ಸುಜಾತ, ಪುಷ್ಪ ಉಪಸ್ಥಿತರಿದ್ದರು.