ವೀರಾಜಪೇಟೆ, ಅ. 31: ವೀರಾಜಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷರಾಗಿ ಮೈತಾಡಿ ಗ್ರಾಮದ ವಿ.ಪಿ. ಲೋಹಿತ್‍ಗೌಡ ಆಯ್ಕೆಯಾಗಿದ್ದಾರೆ.

ಗೋಣಿಕೊಪ್ಪದ ಹಾತೂರಿನ ಪ್ರೌಢಶಾಲಾ ಆವರಣದಲ್ಲಿ ನಡೆದ ವೇದಿಕೆಯ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಕೋಟೆಕೊಪ್ಪ ಗ್ರಾಮದ ವಿ.ಪಿ. ಡಾಲು, ಪ್ರಧಾನ ಕಾರ್ಯದರ್ಶಿಯಾಗಿ ದೇವರಪುರದ ಎನ್. ಮಂಜುನಾಥ್ ಮತ್ತು ಖಜಾಂಚಿಯಾಗಿ ಕೋತೂರಿನ ಕೆ.ಬಿ. ಪವನ್, ಸಹ ಕಾರ್ಯದರ್ಶಿಯಾಗಿ ಕೋತೂರಿನ ದಿನೇಶ್, ಸಂಘಟನಾ ಕಾರ್ಯದರ್ಶಿಯಾಗಿ ವಿ.ಪಿ. ಅಶ್ವಿನಿ ಭರತ್ ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಗೆ ಮಾಜಿ ಅಧ್ಯಕ್ಷ ವಿ.ಎನ್. ಮಹೇಶ್ ಅಧಿಕಾರ ಹಸ್ತಾಂತರ ಮಾಡಿದರು. ಮಹಾಸಭೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕೈಕೇರಿ ಗ್ರಾಮದ ವಿ.ಜಿ. ರಘುನಾಥ್ ಅವರ ಪುತ್ರಿ ವಿ.ಆರ್. ಚರಿಷ್ಮ ಮತ್ತು ಮೈತಾಡಿಯ ಭಟ್ಟಮಕ್ಕಿ ಗ್ರಾಮದ ವಿ.ಎನ್. ಪ್ರಕಾಶ್ ಅವರ ಪುತ್ರ ವಿ.ಪಿ. ಸಚಿನ್ ಇವರುಗಳನ್ನು ಸನ್ಮಾನಿಸಲಾಯಿತು.