ಮಡಿಕೇರಿ, ಅ. 31: ನೇತ್ರಹೀನ ಮಕ್ಕಳಿಗೆ ಸಂವಹನದ ಸೂಕ್ತ ತರಬೇತಿ ಕಾರ್ಯಾಗಾರವನ್ನು ಮಡಿಕೇರಿಯಲ್ಲಿ ಆಯೋಜಿಸಲಾಗಿತ್ತು. ಹೆಚ್.ಡಿ. ಕೋಟೆಯ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ಮಡಿಕೇರಿ ರೋಟರಿ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಕಾರ್ಯಾಗಾರ ಜರುಗಿತು.
ಅಂಧ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಸಂವಹನ ವಿಧಾನಗಳನ್ನು ಕಾರ್ಯಾಗಾರದಲ್ಲಿ ತಜ್ಞರು ನೀಡಿದರು. ಮಡಿಕೇರಿ ರೋಟರಿ ಅಧ್ಯಕ್ಷ ರತನ್ ತಮ್ಮಯ್ಯ, , ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಮಧುಕರ್, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಚಾಲಕ ರಮೇಶ್, ಭವಾನಿ ಪಾಲ್ಗೊಂಡಿದ್ದರು.