ಚೆಟ್ಟಳ್ಳಿ, ಅ. 31: ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಬ್ದುಲ್ ಹಫೀಲ್ ಸಅದಿ ಅವರನ್ನು ಸೋಮವಾರಪೇಟೆ ರೇಂಜ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಕಾಗಡಿಕಟ್ಟೆ ದಾರುಲ್ ಉಲೂಂ ಮದ್ರಸಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೇಂಜ್ ಅಧ್ಯಕ್ಷ ಅಬೂಬಕ್ಕರ್ ಮದನಿ ಅಧ್ಯಕ್ಷತೆ ವಹಿಸಿದರು.

ರೇಂಜ್ ಕಾರ್ಯದರ್ಶಿ ಹಸೈನಾರ್ ಮುಸ್ಲಿಯಾರ್, ಎಸ್‍ಎಸ್.ಎಫ್. ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ, ಹಂಝ ರಹ್ಮಾನಿ, ಇಬ್ರಾಹಿಂ ಸಾಗರ್, ಅಬ್ದುಲ್ ಖಾದರ್, ಯೂಸುಫ್, ಇಬ್ರಾಹಿಂ ಕಾಗಡಿಕಟ್ಟೆ ಇನ್ನಿತರ ಹಲವು ನಾಯಕರು ಪಾಲ್ಗೊಂಡಿದ್ದರು.