ವೀರಾಜಪೇಟೆ, ಅ. 31: ಬಾಲ್ಯದಲ್ಲಿ ಮಕ್ಕಳಿಗೆ ಯಾವದೇ ರೀತಿಯ ಶೈಕ್ಷಣಿಕ ಒತ್ತಡ ಹೇರಬೇಡಿ, ಮಕ್ಕಳಿಗೆ ಪೆÇೀಷಕರೇ ಜೀವನದ ಮೊದಲ ಆದರ್ಶ ವ್ಯಕ್ತಿಗಳಾಗಬೇಕೆಂದು ರೋಟರಿ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಪೆÇೀಷಕರು, ಶಿಕ್ಷಕರಿಗೆ ಕಿವಿಮಾತು ಹೇಳಿದರು.
ವೀರಾಜಪೇಟೆ ರೋಟರಿ ಕ್ಲಬ್ ವತಿಯಿಂದ ರೋಟರಿ ಶಾಲೆಯಲ್ಲಿ ಪ್ಲೇಸ್ಕೂಲ್ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯದಲ್ಲಿ ಮಕ್ಕಳು ಸ್ವಚ್ಛಂದವಾಗಿ ಇರಬೇಕು. ಅವರ ಮೇಲೆ ಅನಗತ್ಯವಾದ ಒತ್ತಡ ಹೇರಿ ಸಂತೋಷಕ್ಕೆ ಅಡ್ಡಿ ಉಂಟು ಮಾಡದಿರಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ವಲಯ 6ರ ಸಹಾಯಕ ಗವರ್ನರ್ ಪಿ.ನಾಗೇಶ್, ವಲಯ 6ರ ಕಾರ್ಯದರ್ಶಿ ಅನಿಲ್ ಎಚ್.ಟಿ., ಜೋನಲ್ ಲೆಫ್ಟಿನೆಂಟ್ ಡಾ. ಎಸ್.ವಿ. ನರಸಿಂಹನ್, ರೋಟರಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟೀರ ಸುನೀಲ್ ನಾಣಯ್ಯ, ಆಡಳಿತಾಧಿಕಾರಿ ಪ್ರಮೀಳಾ ಆರ್.ಪಿ., ಮುಖ್ಯೋಪಾಧ್ಯಾಯಿನಿ ಇಂದಿರಾ ಸುಬ್ಬಯ್ಯ, ರೋಟರಿ ಅಧ್ಯಕ್ಷ ಕೆ.ಎಚ್. ಆದಿತ್ಯ, ಕಾರ್ಯದರ್ಶಿ ಭರತ್ ರಾಮ್ ರೈ ಸೇರಿದಂತೆ ರೋಟರಿ ಪ್ರಮುಖರು ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿಯರಾದ ಸಿ.ಎಂ. ತಾನ್ವಿ ನಿರೂಪಿಸಿ, ಕೆ.ಪಿ.ಶ್ರವ್ಯಾ, ಕೆ.ಪಿ. ಶ್ರಾವ್ಯ, ಪಿ.ಎಸ್. ತಪಸ್ವಿ ಪ್ರಾರ್ಥಿಸಿ, ಶೃತಿ ಮುತ್ತಮ್ಮ ಸ್ವಾಗತಿಸಿ, ರಿಂಶಾ ಶರೀನ್ ವಂದಿಸಿದರು. ಪುಟಾಣಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯಗಳು ಮನಸೂರೆಗೊಂಡವು.