ಮಡಿಕೇರಿ, ಅ.29 : ಕೊಡಗಿನ ಮೂಲ ಸಂಸ್ಕøತಿಯನ್ನು ಉಳಿಸಿ ಬೆಳೆಸುವದು ಪ್ರತಿಯೊಬ್ಬ ಕೊಡವನ ಆದ್ಯ ಕರ್ತವ್ಯವಾಗಬೇಕು ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಕಿವಿಮಾತು ಹೇಳಿದ್ದಾರೆ. ಕೊಡವ ಸಮಾಜದಲ್ಲಿ ನಡೆದ 12 ಕೊಡವ ಕೇರಿಗಳ ನಡುವಿನ 6ನೇ ಕೊಡವ ಅಂತರಕೇರಿ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕೊಡವಕೇರಿ ಎನ್ನುವದು ಒಂದು ಕುಟುಂಬವಿದ್ದಂತೆ, ಪರಸ್ಪರ ಕಷ್ಟ ಸುಖಗಳಿಗೆ ಸ್ಪಂದಿಸುವ ವೇದಿಕೆ ಇದಾಗಿದ್ದು, ಸ್ವಾಭಿಮಾನಿ ಕೊಡವರು ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಒಗ್ಗೂಡಬೇಕು ಎಂದರು.ಮೂಲ ನಿವಾಸಿ ಕೊಡವ ಯುವ ಸಮೂಹ ಉದ್ಯೋಗ ಅರಸುತ್ತಾ ಇತರ ನಗರಗಳಿಗೆ ತೆರಳುತ್ತಿದ್ದಾರೆ. ಇದರಿಂದ ಕೊಡವ ಆಚಾರ, ವಿಚಾರ ಸಂಸ್ಕøತಿ ನಾಶವಾಗುತ್ತಿದೆ. ಮುಂದೆ ಪರಿಸ್ಥಿತಿ ಸುಧಾರಣೆಯಾಗದಿದ್ದಲ್ಲಿ ಕೊಡಗಿನಲ್ಲಿ ಕೊಡವರೇ ಪರಕೀಯರಾಗುವ ಸಾಧ್ಯತೆ ಇದೆ ಎಂದು ನಾಣಯ್ಯ ಗಮನ ಸೆಳೆದರು. ವೈಯಕ್ತಿಕ ಉದ್ದೇಶಗಳಿಗೆ ದೇಶ ವಿದೇಶಗಳೆಡೆಗೆ ಮುಖ ಮಾಡಿದರೂ ಕೊಡಗಿನ ಭೂಮಿಯನ್ನು ಬೇರೆಯವರಿಗೆ ಮಾರಾಟ ಮಾಡಬೇಡಿ ಎಂದು ಸಲಹೆ ನೀಡಿದ ಅವರು, ಕೊಡವ ಸಂಸ್ಕøತಿಯೊಂದಿಗೆ ಭೂಮಿಯನ್ನು ಕೂಡ ಉಳಿಸಿಕೊಳ್ಳಬೇಕಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಮಾತನಾಡಿ, ಕೊಡವರು ಕೊಡವರಾಗಿಯೇ ಉಳಿಯಬೇಕಾದರೆ ಮೂಲ ಭಾಷೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು. ಆಚಾರ ವಿಚಾರ, ಪದ್ಧತಿ, ಪರಂಪರೆಯನ್ನು ಯುವ ಪೀಳಿಗೆಗಾಗಿ ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ. ಹಿರಿಯರು ನೀಡಿರುವ ಭೂಮಿಯನ್ನು ಮುಂದಿನ ಕಿರಿಯರಿಗಾಗಿ ಉಳಿಸಿಕೊಳ್ಳಬೇಕೆ ಹೊರತು ಮಾರಾಟ ಯತ್ನ ಮಾಡಬಾರದು ಎಂದರು.
ಕೊಡವ ಪೊಮ್ಮಕ್ಕಡ ಕೂಟ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಪುರುಷರಿಗೆ ಸಮಾನವಾಗಿ ಬೆಳೆಯುವ ಜೊತೆಗೆ ಕೊಡವಾಮೆಯನ್ನು ಬೆಳೆಸಿಕೊಂಡು ಬಂದಿರುವದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಕೊಡವ ಸಮಾಜದ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಸಿಗುವಂತಾಗಬೇಕು ಎಂದು ವೀಣಾಅಚ್ಚಯ್ಯ ಹೇಳಿದರು.
(ಮೊದಲ ಪುಟದಿಂದ) ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ಮಡಿಕೇರಿ ಕೊಡವ ಸಮಾಜ ಎಲ್ಲಾ ಕೊಡವ ಸಮಾಜಗಳ ಆದ್ಯ ಸಮಾಜವಾಗಿದ್ದು, ತನ್ನದೇ ಪ್ರಮುಖ ಸ್ಥಾನಮಾನವನ್ನು ಉಳಿಸಿಕೊಂಡು ಬಂದಿದೆ ಎಂದರು. ನಗರದಲ್ಲಿ ಕೊಡವ ಸಮಾಜದ ಮೂಲಕ ಬೃಹತ್ ಕಟ್ಟಡ ನಿರ್ಮಾಣ ಮಾಡಲು ಚಿಂತನೆ ನಡೆಸಿದ್ದು, ಎಲ್ಲಾ ಕೊಡವಕೇರಿಗಳು ಸಹಕರಿಸುವಂತೆ ತಿಳಿಸಿದರು.
ಎಲ್ಲಾ ಕೊಡವ ಕೇರಿಗಳು ಒಗ್ಗಟ್ಟಿನಿಂದ ಕೊಡವ ಮೇಳವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಲ್ಲಿ ಅಂತಕೇರಿ ಮೇಳಕ್ಕೆ ಕೊಡವ ಸಮಾಜದ ಸರ್ವ ಸದಸ್ಯರ ಸಹಕಾರದೊಂದಿಗೆ 50 ಸಾವಿರ ರೂ. ನೀಡುವದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಮುತ್ತಪ್ಪ ಕೊಡವ ಕೇರಿಯ ಅಧ್ಯಕ್ಷÀ ಮುಂಡಂಡ ಕೆ. ಗಾಂಧಿ, ಶ್ರೀ ಭಗಂಡೇಶ್ವರ ಕೊಡವ ಅಭಿವೃದ್ಧಿ ಸಂಘದ ಅಧ್ಯಕ್ಷ ಮುಂಡಂಡ ಬಿ. ಪೂವಪ್ಪ, ದೇಚೂರು ಕೊಡವ ಕೇರಿಯ ಅಧ್ಯಕ್ಷÀ ಮಾದೆಯಂಡ ಕುಂಞಪ್ಪ, ಶ್ರೀ ಸುದರ್ಶನ ಕೊಡವ ಕೇರಿಯ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ, ಶ್ರೀ ಕಾವೇರಿ ಕೊಡವ ಕೇರಿ ಅಧ್ಯಕ್ಷ ಕೋಡಿಮಣಿಯಂಡ ಪೂವಣ್ಣ, ಶ್ರೀ ರಾಣಿಪೇಟೆ ಕೊಡವ ಕೂಟ ಅಧ್ಯಕ್ಷÀ ಮಂಡೀರ ಎ. ಪೂಣಚ್ಚ, ಶ್ರೀ ವಿನಾಯಕ ಕೊಡವ ಕೇರಿ ಅಧ್ಯಕ್ಷÀ ಚೊಟ್ಟೆಯಂಡ ಕೆ. ಅಪ್ಪಾಜಿ, ಶ್ರೀ ಸುಬ್ರಮಣ್ಯ ಕೊಡವ ಕೇರಿ ಅಧ್ಯಕ್ಷÀ ಬೊಮ್ಮಂಡ ಗಣಪತಿ, ಶ್ರೀ ಗಣಪತಿ ಕೊಡವ ಕೇರಿ ಅಧ್ಯಕ್ಷÀ ಚೆರುಮಂದಂಡ ಜಿ. ಪೊನ್ನಪ್ಪ, ಶ್ರೀ ಇಗ್ಗುತ್ತಪ್ಪ ಕೊಡವ ಕೇರಿ ಅಧ್ಯಕ್ಷೆ ಕಾವೇರಿ ಪೂಣಚ್ಚ, ಎಫ್.ಎಂ.ಸಿ. ಕೊಡವ ಕೇರಿ ಅಧ್ಯಕ್ಷ ನಾಯಕಂಡ ಬ್ರೌನ್ ಕುಂಞಪ್ಪ, ಭಗವತಿ ಕೊಡವ ಕೇರಿ ಅಧ್ಯಕ್ಷ ಮರುವಂಡ ಬಿ. ಈರಪ್ಪ ಹಾಗೂ ಎಲ್ಲಾ ಕೊಡವ ಕೇರಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಪೊಮ್ಮಕ್ಕಡ ಕೂಟದ ಪ್ರಮುಖರು ಉಪಸ್ಥಿತರಿದ್ದರು.
ಕೇರಿಯ ಹಿರಿಯರಾದ ಚೆಟ್ರಂಡ ಸೋಮಯ್ಯ ಹಾಗೂ ಉದಿಯಂಡ ಮುತ್ತಮ್ಮ ದೇವಯ್ಯ ಅವರುಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಸಂಭ್ರಮದ ಸ್ಪರ್ಧೆ
ಬೆಳಗ್ಗೆ ಹಿರಿಯ ಸದಸ್ಯ ಚೆಟ್ರಂಡ ಸೋಮಯ್ಯ ಅವರು ವಿವಿಧ ಸ್ಪರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಮೇಳದಲ್ಲಿ ಪುರುಷರಿಗೆ ಬೊಳಕಾಟ್, ಕೋಲಾಟ್, ಪರೆಯಕಳಿ, ಬಾಳೋಪಾಟ್, ಮಹಿಳೆಯರಿಗೆ ಉಮ್ಮತ್ತಾಟ್, ಮಕ್ಕಳಿಗೆ ಕಪ್ಪೆಯಾಟ್, ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ವಾಲಗತಾಟ್, ಸಮ್ಮಂದ ಅಡ್‍ಕ್‍ವೊ, ಕೊಡವ ಪಾಟ್ ಸ್ಪರ್ಧೆಗಳು ನಡೆದವು. ಸಂಜೆ ಕೊಡವ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.
-ವರದಿ : ಎಸ್.ಆರ್.ವತ್ಸಲ