*ಸಿದ್ದಾಪುರ, ಅ. 30: ಸರಕಾರದ ಆದೇಶದಂತೆ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ಕೆಡಿಪಿ ಸಭೆಯನ್ನು ಅಧಿಕಾರಿಗಳ ಗೈರು ಹಾಜರಾತಿ ಯಿಂದಾಗಿ ಮುಂದೂಡಲ್ಪಟ್ಟ ಪ್ರಸಂಗ ಎದುರಾಯಿತು.ಗ್ರಾ.ಪಂ. ವ್ಯಾಪ್ತಿಯ ಕೆಡಿಪಿ ಸಭೆ ಗ್ರಾ.ಪಂ. ಅಧ್ಯಕ್ಷೆ ಜೈನಭಾ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕೆಡಿಪಿ ಸಭೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳೂ ಭಾಗವಹಿಸಬೇಕೆಂಬ ನಿಯಮವಿದ್ದರೂ ಇಂದಿನ ಸಭೆಗೆ ಕೇವಲ 8 ಮಂದಿ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು. ಇದರಿಂದ ಅಸಮಾಧಾನಿತರಾದ ಗ್ರಾಮಸ್ಥರು ಅಧಿಕಾರಿಗಳ ಗೈರು ಹಾಜರಾತಿಯನ್ನು ಖಂಡಿಸಿದರಲ್ಲದೆ, ಮುಂದೂಡುವಂತೆ ಒತ್ತಾಯಿಸಿದರು. ಅಂತಿಮವಾಗಿ ಅಧ್ಯಕ್ಷರು ಸಭೆಯನ್ನು ಮುಂದೂಡಿದರು.