ನಾಪೋಕ್ಲು, ಅ.30: ಕೊಡಗಿನ ಆರಾಧ್ಯದೈವ ಮಳೆ ದೇವರೆಂದೇ ಖ್ಯಾತಿ ಪಡೆದಿರುವ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರು, ಪತ್ನಿ ಮೋನಾ ಬೋಪಣ್ಣ, ಪುತ್ರ ಕೃಶಾಲ್ ಸೋಮಯ್ಯ ಹಾಗೂ ಸಹೋದರ ಸನ್ನಿ, ಸಹೋದರನ ಪತ್ನಿ ಶಶಿ, ಪುತ್ರ ತೇಜ್ ತಮ್ಮಯ್ಯ ಮತ್ತು ಸಹೋದರಿ ಕುಸುಮ ಅವರೊಂದಿಗೆ ಇಗ್ಗುತ್ತಪ್ಪ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರ ಪುತ್ರ ಕೃಶಾಲ್ ಸೋಮಯ್ಯ ಅವರು ತುಲಾಭಾರ ಸೇವೆ ಸಲ್ಲಿಸಿದರು. ದೇವಾಲಯದ ಮುಖ್ಯ ಅರ್ಚಕ ಕುಶ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ನಿರ್ದೇಶಕ ಮಾರ್ಚಂಡ ಪ್ರವೀಣ್, ಪಾರುಪತ್ತೇಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ನಾಪೋಕ್ಲು ಠಾಣಾಧಿಕಾರಿ ಮಂಚಯ್ಯ, ಗ್ರಾಮಲೆಕ್ಕಿಗರಾದ ಅಮೃತಾ ಸೇರಿದಂತೆ ಮತ್ತಿತರರು ಹಾಜರಿದ್ದರು.
-ದುಗ್ಗಳ