ಮಡಿಕೇರಿ, ಅ. 30: ಸೋಮವಾರಪೇಟೆಯ ಕೊಡವ ಸಮಾಜ ಸಭಾಂಗಣದಲ್ಲಿ ನಡೆದಂತಹ ಕೊಡಗು ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ವೀರಾಜಪೇಟೆಯ ನಮಿತಾ ಶೆಣೈ ಬಿ.ಎಂ. ಇವರು ಶಾಸ್ತ್ರೀಯ ನೃತ್ಯ ವಿಭಾಗದ ಒಡಿಸ್ಸಿ ನೃತ್ಯ ಹಾಗೂ ಮಣಿಪುರಿ ನೃತ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ನಡೆಸುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಒಡಿಸ್ಸಿ ಮತ್ತು ಮಣಿಪುರಿ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ನಮಿತಾ ಶೆಣೈ ಪಡೆದಿದ್ದಾಳೆ.ನಮಿತಾ ಶೆಣೈ ವೀರಾಜಪೇಟೆಯ ಜಗನ್ಮೋಹನ ನಾಟ್ಯಾಲಯದ ವಿದ್ವಾನ್ ಕೆ.ಟಿ. ರಾಜೇಶ್ ಆಚಾರ್ಯ ಅವರ ಶಿಷ್ಯೆಯಾಗಿದ್ದು. ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಮೊದಲ ಬಿ.ಕಾಂ. ವಿದ್ಯಾರ್ಥಿನಿಯಾಗಿದ್ದಾಳೆ.ಈಕೆಯು ವೀರಾಜಪೇಟೆಯ ‘ಕೊಡಗು ಸಮಾಚಾರ’ ಸಂಪಾದಕ ಬಿ.ಎನ್. ಮನುಶೆಣೈ ಹಾಗೂ ಸುಮಾಶೆಣೈ ಬಿ.ಎಂ. ದಂಪತಿಗಳ ಪುತ್ರಿ.