*ಗೋಣಿಕೊಪ್ಪಲು, ಅ. 28 : ಬಿರುನಾಣಿ ಬಳಿಯ ಪರಕಟಗೇರಿಯಲ್ಲಿ ಈಚಿಗೆ ಬೀಸಿದ ಬಿರುಗಾಳಿ ಮಳೆಗೆ ಬಲಿಯಾದ ಕಾಫಿ ಬೆಳೆಗಾರ ಕುಪ್ಪಣಮಾಡ ಪೂಣಚ್ಚ ಅವರ ಮನೆಗೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಮೃತರ ಪತ್ನಿ ಕುಪ್ಪಣಮಾಡ ಲಿಲ್ಲಿ ಅವರಿಗೆ ರೂ 5ಲಕ್ಷದ ಪರಿಹಾರ ಚೆಕ್ ನೀಡಿದರು.

ಬಳಿಕ ಮಾತನಾಡಿದ ಅವರು ಪ್ರಾಕೃತಿಕ ವಿಕೋಪಕ್ಕೆ ತುತ್ತಾದವರಿಗೆ ಸರಕಾರ ಕೂಡಲೇ ಸ್ಪಂದಿಸಲಿದೆ. ಮನಸ್ಸಿಗೆ ಧೈರ್ಯ ತಂದುಕೊಳ್ಳಬೇಕು ಎಂದು ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್‍ಕುಮಾರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅರುಣ್ ಭೀಮಯ್ಯ, ಪೊನ್ನಂಪೇಟೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು ಹಾಜರಿದ್ದರು.