ಮಡಿಕೇರಿ, ಅ. 28: ಮಡಿಕೇರಿ ನಗರ ವ್ಯಾಪ್ತಿಯಲ್ಲಿರುವ 12 ವಿವಿಧ ಕೊಡವ ಕೇರಿಗಳನ್ನು ಒಳಗೊಂಡಂತೆ ತಾ. 29 ರಂದು (ಇಂದು) ನಗರದ ಕೊಡವ ಸಮಾಜದಲ್ಲಿ ಅಂತರ ಕೊಡವಕೇರಿ ಮೇಳ ಕಾರ್ಯಕ್ರಮ ಜರುಗಲಿದೆ. 6ನೇ ಅಂತರಕೇರಿ ಮೇಳ ಇದಾಗಿದ್ದು, ಮುತ್ತಪ್ಪಕೇರಿಯ ಮುಂದಾಳತ್ವದಲ್ಲಿ ಜರುಗಲಿದ್ದು, ವಿವಿಧ ಸ್ಪರ್ಧಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಸನ್ಮಾನ, ಸಂಜೆ ಕೊಡವ ಆರ್ಕೆಸ್ಟ್ರಾದಂತಹ ಕಾರ್ಯಕ್ರಮ ನಡೆಯಲಿದೆ.