ಮಡಿಕೇರಿ, ಅ. 28: ಮದೆನಾಡು ವ್ಯಾಪ್ತಿಯಲ್ಲಿ ತಾ. 26 ರಂದು ಅರಣ್ಯ ಇಲಾಖೆಯಿಂದ ಕಾಡಾನೆಗಳ ವಿರುದ್ಧ ಕಾರ್ಯಾಚರಣೆ ವೇಳೆ; ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮದೆ ದೇವರಕಾಡು ಎಂಬಲ್ಲಿನ ತೋಟದೊಳಗೆ ಬೀಡು ಬಿಟ್ಟಿದ್ದ ಕಾಡಾನೆ ಹಿಂಡನ್ನು ಅರಣ್ಯದೊಳಗೆ ಓಡಿಸುವ ಸಂದರ್ಭ ಸಲಗವೊಂದು ಜನತೆಯೆಡೆಗೆ ಧಾವಿಸಿದೆ.

ಈ ವೇಳೆ ಎದುರು ಸಿಕ್ಕಿರುವ ಬಿ. ನೀಲಾಧರ (64) ಎಂಬವರಿಗೆ ಗಂಭೀರ ಗಾಯವಾಗಿದ್ದು, ಅವರಿಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೀಗ ಮತ್ತೆ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕಕ್ಕೆ ಸೇರಿಸಲಾಗಿದೆ.

ಕಾಡಾನೆ ಹಿಂಡು ಮದೆ ವ್ಯಾಪ್ತಿಯಲ್ಲಿ ನಿರಂತರ ಉಪಟಳ ನೀಡುತ್ತಿರುವ ಸಂಬಂಧ ಕಾರ್ಯಾಚರಣೆ ಕೈಗೊಂಡಿದ್ದು, ಅರಣ್ಯ ಸಿಬ್ಬಂದಿ ಕೂಡ ಸಣ್ಣಪುಟ್ಟ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.