ಚೆಟ್ಟಳ್ಳಿ, ಅ. 28: ಚೆಟ್ಟಳ್ಳಿ ಜೋಮಾಲೆ ಪೊಮ್ಮಕ್ಕಡ ಕೂಟದಿಂದ ಮಂಗಳ ಸಭಾಂಗಣದಲ್ಲಿ ನಡೆದ ಕಾವೇರಿ ಚಂಗ್ರಾಂದಿ ಆಚರಣೆಯಲ್ಲಿ ಕಾವೇರಿಮಾತೆಯನ್ನು ಅಲಂಕರಿಸಿ ತೀರ್ಥವನ್ನು ಪೂಜಿಸುವ ಮೂಲಕ ಆಚರಿಸಲಾಯಿತು.

ಪೊಮ್ಮಕ್ಕಡ ಕೂಟದವರ ಸಾಮೂಹಿಕ ಕಾವೇರಿ ಕೀರ್ತನೆ ಯೊಂದಿಗೆ ಪ್ರಾರಂಭಿಸಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿತು. ಕೂಟದ ಅಧ್ಯಕ್ಷರಾದ ಮುಳ್ಳಂಡ ಶೋಭಾ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶೋಭಾಚಂಗಪ್ಪನವರು ಸ್ವಾಗತಿಸಿ ಪೊಮ್ಮಕ್ಕಡ ಕೂಟವನ್ನು ಇನ್ನಷ್ಟು ಬಲಪಡಿಸಬೇಕು, ಚೆಟ್ಟಳ್ಳಿಯಲ್ಲಿ ಕೊಡವ ಸಮಾಜವನ್ನು ಸ್ಥಾಪಿಸಲು ಎಲ್ಲರು ಕೈಜೋಡಿಸು ವಂತಾಗಬೇಕೆಂದರು. ಪುತ್ತರಿರ ಸೀತಮ್ಮ ಮೊಣ್ಣಪ್ಪ ಕುಲದೇವಿ ಕಾವೇರಿ ಮಾತೆಯು ಜನ್ಮತಾಳಿದ ಬಗ್ಗೆ, ಕೊಡಗಿನವರು ಶ್ರದ್ಧಾಭಕ್ತಿಯಿಂದ ಪೂಜಿಸುವ ಬಗ್ಗೆ ವಿವರಿಸಿದರು. ಕಾರ್ಯದರ್ಶಿ ಐಚೆಟ್ಟಿರ ಸುನಿತ ಮಾಚಯ್ಯ ಸಂಘದ ವರದಿಯನ್ನು ಓದಿದರು.

ಖಜಾಂಚಿ ಪುತ್ತರಿರ ಗಂಗು ಅಚ್ಚಯ್ಯ ಲೆಕ್ಕಪತ್ರ ಮಂಡಿಸಿದರು. ಮುಳ್ಳಂಡ ಸುಶೀಲ ತಮ್ಮಯ್ಯ ವಂದಿಸಿದರು.