ಗೋಣಿಕೊಪ್ಪ ವರದಿ, ಅ. 28: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಭಾನುವಾರ, ಸೋಮವಾರ ನಡೆದ ಪುರುಷರ ಬಿ. ಡಿವಿಜನ್ ಹಾಕಿ ಲೀಗ್ನಲ್ಲಿ 7 ತಂಡಗಳು ಜಯಗಳಿಸಿ ಮುನ್ನಡೆ ಪಡೆದುಕೊಂಡಿದ್ದು, 3 ಪಂದ್ಯ ಡ್ರಾಗೊಂಡಿವೆ.
ಭಾನುವಾರದ ಫಲಿತಾಂಶ : ಬೊಟ್ಯತ್ನಾಡ್ ತಂಡವು 2-1 ಗೋಲುಗಳಿಂದ ಸೋಮವಾರಪೇಟೆ ಡಾಲ್ಫೀನ್ಸ್ ವಿರುದ್ದ ಜಯಿಸಿತು. ಬೊಟ್ಯತ್ನಾಡ್ ಪರವಾಗಿ 3 ರಲ್ಲಿ ಬೋಪಣ್ಣ, 18 ರಲ್ಲಿ ಚಿಟ್ಯಪ್ಪ, ಡಾಲ್ಫಿನ್ಸ್ ಪರ 26 ರಲ್ಲಿ ಕಾರ್ತಿಕ್ ಗೋಲು ಹೊಡೆದರು.
ಪೆರೂರಿಯನ್ಸ್ ಹಾಗೂ ಶ್ರೀಮಂಗಲ ಕೊಡವ ಸಮಾಜ ತಂಡಗಳ ನಡುವಿನ ಪಂದ್ಯ 2-2 ಗೋಲುಗಳ ರೋಚಕ ಡ್ರಾ ಫಲಿತಾಂಶ ನೀಡಿತು. ಪೆರೂರು ಪರ 14, 39 ನೇ ನಿಮಿಷಗಳಲ್ಲಿ ಅಪ್ಪಣ್ಣ, ಶ್ರೀಮಂಗಲ ಪರ 13, 18 ನೇ ನಿಮಿಷಗಳಲ್ಲಿ ಕಿಶನ್ ಗೋಲು ಹೊಡೆದರು.
ವೀರಾಜಪೇಟೆ ಕೊಡವ ಸಮಾಜ ತಂಡವು ಮರೆನಾಡ್ ಸ್ಪೋಟ್ರ್ಸ್ ಕ್ಲಬ್ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು. ವೀರಾಜಪೇಟೆ ಪರ 4, 25 ನೇ ನಿಮಿಷಗಳಲ್ಲಿ ಚೇತನ್, 33 ರಲ್ಲಿ ಜೀವನ್, 39 ರಲ್ಲಿ ನಾಣಯ್ಯ ಗೋಲು ಹೊಡೆದರು.
ಡ್ರಿಬ್ಲ್ ಹೆಂಪ್ ತಂಡದ ವಿರುದ್ದ ಕಿರುಗೂರು ತಂಡವು 3-1 ಗೋಲುಗಳಿಂದ ಜಯ ಗಳಿಸಿತು. ಕಿರುಗೂರು ಪರವಾಗಿ 18, 20ನೇ ನಿಮಿಷಗಳಲ್ಲಿ ಸುಬ್ಬಯ್ಯ, 22ರಲ್ಲಿ ಪೊನ್ನಣ್ಣ, ಡ್ರಿಬ್ಲ್ ಪರ 11ನೇ ನಿಮಿಷದಲ್ಲಿ ಸೋಮಣ್ಣ ಗೋಲು ಭಾರಿಸಿದರು.
ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ಹಾಗೂ ಹುದಿಕೇರಿ ಮಲೆನಾಡ್ ತಂಡಗಳ ನಡುವಿನ ಪಂದ್ಯ 0-0 ಗೋಲುಗಳ ಡ್ರಾದಲ್ಲಿ ಅಂತ್ಯವಾಯಿತು.
ಸೋಮವಾರದ ಫಲಿತಾಂಶ ; ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ತಂಡವು ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಬಿ ತಂಡವನ್ನು 1-0 ಗೋಲುಗಳ ಮೂಲಕ ಮಣಿಸಿತು. ಅಮ್ಮತ್ತಿ ಪರ 24 ನೇ ನಿಮಿಷದಲ್ಲಿ ಮುಖೇಶ್ ನಾಣಯ್ಯ 1 ಗೋಲು ಹೊಡೆದರು.
ಕಿರುಗೂರು ತಂಡವು ಮರೆನಾಡ್ ಸ್ಪೋಟ್ರ್ಸ್ ಕ್ಲಬ್ ತಂಡದ ವಿರುದ್ದ 5-0 ಗೋಲುಗಳ ಜಯ ದಾಖಲಿಸಿತು. ಕಿರುಗೂರು ಪರ 18, 27 ನೇ ನಿಮಿಷಗಳಲ್ಲಿ ಸುಬ್ಬಯ್ಯ, 13 ರಲ್ಲಿ ಮಧು, 15ರಲ್ಲಿ ದರ್ಶನ್, 39 ರಲ್ಲಿ ಉತ್ತಯ್ಯ ಗೋಲು ಹೊಡೆದರು.
ಬೊಟ್ಯತ್ನಾಡ್ ತಂಡವು ಶ್ರೀಮಂಗಲ ಕೊಡವ ಸಮಾಜ ತಂಡವನ್ನು 3-0 ಗೋಲುಗಳಿಂದ ಮಣಿಸಿತು. 4, 39ನೇ ನಿಮಿಷಗಳಲ್ಲಿ ಬೋಪಣ್ಣ, 22ರಲ್ಲಿ ಪೊನ್ನಣ್ಣ ಗೋಲು ಭಾರಿಸಿದರು.
ಮೂರ್ನಾಡು ಜನರಲ್ ತಿಮ್ಮಯ್ಯ ತಂಡವು ಪೆರೂರಿಯನ್ಸ್ ತಂಡದ ವಿರುದ್ದ 3-2 ಗೋಲುಗಳ ಜಯ ಪಡೆಯಿತು. ಜನರಲ್ ತಿಮ್ಮಯ್ಯ ಪರ 14ರಲ್ಲಿ ನಾಣಯ್ಯ, 17ರಲ್ಲಿ ಕಾಳಪ್ಪ, 31ರಲ್ಲಿ ಗಣಪತಿ, ಪೆರೂರಿಯನ್ಸ್ ಪರ 19ರಲ್ಲಿ ಜಗದೀಶ್, 36ರಲ್ಲಿ ತಮ್ಮಯ್ಯ ಗೋಲು ಹೊಡೆದರು.
ವೀರಾಜಪೇಟೆ ಕೊಡವ ಸಮಾಜ ಹಾಗೂ ಡ್ರಿಬ್ಲ್ ಹೆಂಪ್ ತಂಡಗಳ ಪಂದ್ಯ 1-1 ಗೋಲುಗಳ ಡ್ರಾ ಫಲಿತಾಂಶ ನೀಡಿತು. ವೀರಾಜಪೇಟೆ ಪರ 12 ರಲ್ಲಿ ನಾಣಯ್ಯ, ಡಿಬ್ಲ್ ಪರ 23 ರಲ್ಲಿ ಅಪ್ಪಚ್ಚು ಗೋಲು ಹೊಡೆದರು.
ವರದಿ; ಸುದ್ದಿಮನೆ, ಚಿತ್ರ ; ಚನ್ನನಾಯಕ