ನಾಪೋಕ್ಲು, ಅ. 28: ವಿದ್ಯಾರ್ಥಿಗಳು ಶಿಸ್ತು ಮತ್ತು ಕರ್ತವ್ಯ ಪಾಲನೆ ಮಾಡುವದರ ಮೂಲಕ ಉತ್ತಮ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ರಾಫೆಲ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಯಾನ ಸೋಮಯ್ಯ ಹೇಳಿದರು. ಕಾಲೇಜಿನಲ್ಲಿ ನೂತನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಡಯಾನ ಸೋಮಯ್ಯ ವಿವಿಧ ಕಾಲೇಜುಗಳಲ್ಲಿ ಸೇವೆಸಲ್ಲಿಸಿ ಇದೀಗ ರಾಫೆಲ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಮೆಹಬೂಬ್ ಸಾಬ್, ಮುಝೀಬ್ ಮತ್ತು ಉಪನ್ಯಾಸಕ ವೃಂದ ಮತ್ತಿತರರು ಇದ್ದರು.