ಸಿದ್ದಾಪುರ, ಅ. 28: ವಿಷಪೂರಿತ ಹಾವೊಂದು ಕಾರಿನಲ್ಲಿ ಸೇರಿಕೊಂಡು ಆತಂಕ ಸೃಷ್ಠಿಸಿದ ಪ್ರಸಂಗ ಸೋಮವಾರ ನಡೆದಿದೆ.

ಅಭ್ಯತ್ ಮಂಗಲ ಗ್ರಾಮದ ಮಡ್ತೆಲೆ ರಾಮಚಂದ್ರ ಎಂಬವರು ತಮ್ಮ ಮನೆಯಿಂದ ಕಾರಿನಲ್ಲಿ ಕೆಲಸದ ನಿಮಿತ್ತ ಸಿದ್ದಾಪುರ ಪಟ್ಟಣಕ್ಕೆ ಆಗಮಿಸಿದ್ದರು. ಸಿದ್ದಾಪುರ ಬಸ್ಸ್ ನಿಲ್ದಾಣದ ಕೃಷ್ಣ ಬೇಕರಿ ಮುಂಭಾಗದಲ್ಲಿ ಕಾರನ್ನು ನಿಲ್ಲ್ಲಿಸಿದ ಸಂದರ್ಭ ದಿಢೀರನೆ ರಾಮಚಂದ್ರ ಅವರ ಕಾರಿನಿಂದ ವಿಷಪೂರಿತ ಹಾವೊಂದು ಇಳಿದು, ಸಮೀಪದ ಅಂಗಡಿಗೆ ಹತ್ತಲು ಪ್ರಯತ್ನಿಸಿತು. ಈ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರು ಹಾವನ್ನು ಕಂಡು ಕಕ್ಕಾಬಿಕ್ಕಿಯಾಗಿ ಓಡಿದರು. ಕೂಡಲೇ ಕೃಷ್ಣ ಬೇಕರಿಯ ಮಾಲೀಕ ಬಿಜೋಯ್ ಎಚ್ಚೆತ್ತುಕೊಂಡು ಹಾವನ್ನು ಸೆರೆಹಿಡಿದರು. ನಂತರ ಸ್ಥಳದಲ್ಲಿದ್ದ ಯುವಕನೋರ್ವ ವಿಷಪೂರಿತ ಹಾವನ್ನು ಡಬ್ಬದಲ್ಲಿ ಹಾಕಿ ಕಾಡಿಗೆ ಬಿಟ್ಟಿದ್ದಾನೆ. ಅದೃಷ್ಟವಶಾತ್ ರಾಮಚಂದ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.