ಚೆಟ್ಟಳ್ಳಿ, ಅ. 26: ಕರ್ನಾಟಕ ಸಾರಿಗೆ ವತಿಯಿಂದ ಗ್ರಾಮೀಣ ಭಾಗವಾದ ಕೂತಿ, ನಗರಳ್ಳಿಗೆ ನೂತನ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಬೆಳಗ್ಗೆ 8.15ಕ್ಕೆ ಸೋಮವಾರಪೇಟೆಯಿಂದ ಹೊರಟು ಬಸವನಕಟ್ಟೆ-ನಗರಳ್ಳಿ-ಕೂತಿ-ತೋಳೂರುಶೆಟ್ಟಳ್ಳಿ - ಸೋಮವಾರಪೇಟೆ ಮಾರ್ಗವಾಗಿ ಹಾಸನಕ್ಕೆ ತೆರಳಲಿದೆ.
ಸಂಜೆ 4 ಗಂಟೆಗೆ ಸೋಮವಾರಪೇಟೆ ನಿಲ್ದಾಣದಿಂದ ಹೊರಟು ತೋಳೂರುಶೆಟ್ಟಳ್ಳಿ-ಕೂತಿ-ನಗರಳ್ಳಿ-ಬಸವನಕಟ್ಟೆ ಮೂಲಕ ಸೋಮವಾರಪೇಟೆ ಬಸ್ ನಿಲ್ದಾಣ ತಲಪಿ ನಂತರ ಮಡಿಕೇರಿಗೆ ತೆರಳಲಿದೆ.