ಗೋಣಿಕೊಪ್ಪ ವರದಿ, ಅ. 26: ಬಾಳೆಲೆ ಸಮೀಪದ ನಿಟ್ಟೂರು ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರು ಭಯಗೊಂಡಿದ್ದಾರೆ. ಮೇಚಂಡ ಸೋಮಯ್ಯ ಎಂಬವರಿಗೆ ಸೇರಿದ ಗದ್ದೆಯಲ್ಲಿ ಶನಿವಾರ ಬೆಳಿಗ್ಗೆ ಹುಲಿ ಓಡಾಡಿರುವ ಗುರುತು ಪತ್ತೆಯಾಗಿದೆ. ಇದರಿಂದ ಸ್ಥಳೀಯರು ಭಯಗೊಂಡಿದ್ದಾರೆ. ನಾಗರಹೊಳೆ ಉದ್ಯಾನವನದ ಸಮೀಪವಿರುವ ಗ್ರಾಮವಾಗಿರುವದರಿಂದ ಅರಣ್ಯದಿಂದ ಹುಲಿ ಮತ್ತೆ ಗ್ರಾಮಕ್ಕೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.