ಮಡಿಕೇರಿ, ಅ. 26: ಲಿಮ್ಕಾ ಬುಕ್ ಆಫ್ ದಾಖಲೆಯೊಂದಿಗೆ ಗಿನ್ನಿಸ್ ಬುಕ್ ದಾಖಲೆಯ ಕದ ತಟ್ಟುತ್ತಿರುವ ಕೊಡಗಿನಲ್ಲಿ ಕಳೆದ ಹಲವು ವರ್ಷಗಳಿಂದ ನಡೆದು ಕೊಂಡು ಬರುತ್ತಿರುವ ಜನಪ್ರಿಯವಾದ ಕೌಟುಂಬಿಕ ಹಾಕಿ ಉತ್ಸವದ 23ನೇ ವರ್ಷದ ತಯಾರಿ ತಾ. 27 ರಿಂದ (ಇಂದಿನಿಂದ) ಅಧಿಕೃತವಾಗಿ ಆರಂಭಗೊಳ್ಳಲಿದೆ.
ಕಳೆದ ವರ್ಷದ ಪ್ರಾಕೃತಿಕ ದುರಂತದ ಹಿನ್ನೆಲೆಯಲ್ಲಿ ಸತತ 22 ವರ್ಷಗಳಿಂದ ನಡೆದುಕೊಂಡು ಬಂದಿದ್ದ ‘ಹಾಕಿ ನಮ್ಮೆ’ಗೆ ಒಂದು ವರ್ಷದ ‘ಬ್ರೇಕ್’ ಬಿದ್ದಿತ್ತು. ಆಯೋಜ ಕರಾಗಿದ್ದ ಹರಿಹರ ಮುಕ್ಕಾಟಿರ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿ ಪ್ರಾಕೃತಿಕ ದುರಂತದ ಹಿನ್ನೆಲೆಯಲ್ಲಿ ಒಂದು ವರ್ಷದ ಮಟ್ಟಿಗೆ ಮಾನವೀಯ ನೆಲೆಗಟ್ಟಿನಲ್ಲಿ ಹಾಕಿ ಉತ್ಸವವನ್ನು ಮುಂದೂಡುವ ನಿರ್ಧಾರ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ 2019ರ ಏಪ್ರಿಲ್-ಮೇ ತಿಂಗಳಿನಲ್ಲಿ ಬಾಳುಗೋಡುವಿನಲ್ಲಿ ಆಯೋಜಿತವಾಗಿದ್ದ ಮುಕ್ಕಾಟಿರ ಕಪ್ ಮುಂದೂಡಲ್ಪಟ್ಟಿದ್ದು, ಇದೀಗ ಇದೇ ಕುಟುಂಬ 2020ರಲ್ಲಿ ಬಾಳುಗೋಡು ವಿನಲ್ಲೇ ಈ ಉತ್ಸವವನ್ನು ಆಚರಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ.ಹಲವು ಪೂರ್ವ ತಯಾರಿಗಳ ಬಳಿಕ ಇದೀಗ ತಾ. 27 ರಂದು (ಇಂದು) ಬಾಳುಗೋಡುವಿನ ಕೊಡವ ಸಾಂಸ್ಕøತಿಕ ಮತ್ತು ಕ್ರೀಡಾ ಸಮುಚ್ಚಯದಲ್ಲಿ ಉತ್ಸವದ ಲಾಂಛನದ ಅಧಿಕೃತ ಬಿಡುಗಡೆ ಸಮಾರಂಭ ನಿಗದಿಯಾಗಿದೆ. ಸಂಸದ ಪ್ರತಾಪ್ ಸಿಂಹ ಸೇರಿದಂತೆ, ಜಿಲ್ಲೆಯ ಜನಪ್ರತಿನಿಧಿಗಳು, ಹಾಕಿ ಅಕಾಡೆಮಿ ಹಾಗೂ ಕುಟುಂಬದ ಪ್ರಮುಖರು, ಇನ್ನಿತರ ಹಾಕಿ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮುಂದಿನ ಬಾರಿಗೂ ಈಗಲೇ ಸಿದ್ಧತೆ24ನೇ ವರ್ಷದ ಹಾಕಿ ನಮ್ಮೆಯನ್ನು ಆಯೋಜಿಸುವ ಜವಾಬ್ದಾರಿಯನ್ನು 2021ರಲ್ಲಿ ಬಲ್ಲಮಾವಟಿ ಮೂಲದವರಾದ ಅಪ್ಪಚೆಟ್ಟೋಳಂಡ ಕುಟುಂಬ ವಹಿಸಿದ್ದು, ಕೊಡವ ಹಾಕಿ ಅಕಾಡೆಮಿಯ ಮೂಲಕ ಇದಕ್ಕೆ ಅನುಮೋದನೆ ದೊರೆತಿದೆ. 2021ರ ಉತ್ಸವವನ್ನೂ ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಅಪ್ಪಚೆ ಟ್ಟೋಳಂಡ ಕುಟುಂಬವೂ ಈಗಾಗಲೇ ಪೂರ್ವ ತಯಾರಿಯನ್ನು ಹಮ್ಮಿಕೊಂಡಿದೆ.
ಈ ನಿಟ್ಟಿನಲ್ಲಿ ತಾ. 20 ರಂದು ಅಪ್ಪಚೆಟ್ಟೋಳಂಡ
(ಮೊದಲ ಪುಟದಿಂದ) ಕುಟುಂಬದವರು ಬೆಂಗಳೂರು ಕೊಡವ ಸಮಾಜದ ಕಾವೇರಿ ಸಭಾಂಗಣದಲ್ಲಿ ಅಲ್ಲಿ ನೆಲೆಸಿರುವ ಕುಟುಂಬಸ್ಥರನ್ನು ಒಳಗೊಂಡಂತೆ ಸಭೆಯೊಂದನ್ನು ನಡೆಸಿದ್ದಾರೆ.
ಅಪ್ಪಚೆಟ್ಟೋಳಂಡ ಚರ್ಮಣ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಭೆಯಲ್ಲಿ ಪ್ರಮುಖರಾದ ಮನುಮುತ್ತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಾಕಿ ಉತ್ಸವದ ಕುರಿತಾಗಿ ವಿವರಿಸಿದರು. ಸಭೆಯಲ್ಲಿ ಬೆಂಗಳೂರು ವಿಭಾಗದ ಸಂಚಾಲಕರನ್ನಾಗಿ ಮನು ಮಾದಪ್ಪ ಅವರನ್ನು ನೇಮಕ ಮಾಡಲಾಯಿತು.
ಸಹ ಸಂಚಾಲಕರಾಗಿ ಎ.ಕೆ. ನಾಚಪ್ಪ ನಿಯುಕ್ತಿಗೊಂಡಿದ್ದು, ಬೆಂಗಳೂರು ವಿಭಾಗದಲ್ಲಿ ಇವರ ನೇತೃತ್ವದಲ್ಲಿ ಅಗತ್ಯ ಪ್ರಯತ್ನಗಳನ್ನು ಈಗಿನಿಂದಲೇ ನಡೆಸಲು ತೀರ್ಮಾನಿಸಲಾಯಿತು. ಮಿಥುನ್ ಮಾಚಯ್ಯ ಸ್ವಾಗತಿಸಿ, ವಸಂತ್ ಮುತ್ತಪ್ಪ ವಂದಿಸಿದರು. ಸಭೆಯಲ್ಲಿ ರಾಜ ಪೂವಯ್ಯ, ಪೂದೇವಯ್ಯ, ಪಾಲಿ ಬೆಳ್ಯಪ್ಪ, ಎ.ಕೆ. ನವೀನ್, ಶ್ಯಾಮ್ ಕಾಳಯ್ಯ ಮತ್ತಿತರರು ಉಪಸ್ಥಿತರಿದ್ದರು.