ಶ್ರೀಮಂಗಲ, ಅ. 26: ಚಂಗ್ರಾಂದಿ ಪತ್ತಲೋದಿ ವಿಶೇಷ ಜನೋತ್ಸವ ಕಾರ್ಯಕ್ರಮವನ್ನು 10 ದಿನಗಳವರೆಗೆ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ ಯಶಸ್ವಿಯಾಗಿ ನಡೆಸುತ್ತಿದ್ದು, 6 ದಿನಗಳ ಕಾರ್ಯಕ್ರಮವನ್ನು ಪೂರೈಸಿದ್ದು, ಜನಮನ ಗೆದ್ದಿದೆ ಎಂದು ಗೋಣಿಕೊಪ್ಪ ಎ.ಪಿ.ಎಂ.ಸಿ. ಸದಸ್ಯೆ ಬೊಳ್ಳಜ್ಜೀರ ಸುಶೀಲಾ ಅಶೋಕ ಸಂತಸ ವ್ಯಕ್ತಪಡಿಸಿದರು.

ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ, ಸಂಭ್ರಮ ಪೆÇಮ್ಮಕ್ಕಡ ಸಂಸ್ಥೆ ಹಾಗೂ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಸಹಕಾರದಲ್ಲಿ ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಚ್ಚಮಾಡ ರಾಜು ಕುಟ್ಟಪ್ಪ ಹಾಗೂ ಶ್ರೀಮತಿ ಕುಟ್ಟಪ್ಪ, ಪೆÇನ್ನಂಪೇಟೆ ಸಾಯಿ ಶಂಕರ್ ವಿದ್ಯಾಸಂಸ್ಥೆಯ ಉಪನ್ಯಾಸಕ ತೇಲಂಡ ತಿಮ್ಮಯ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತನಾಡಿದ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ವಹಿಸಿದ್ದರು. ಈ ಸಂದರ್ಭ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಳೆದ ವರ್ಷ ಉತ್ತರ ಕೊಡಗಿನಲ್ಲಿ ಮಹಾಮಳೆಗೆ ಬದುಕು ಕಳೆದುಕೊಂಡು ಪೆÇನ್ನಂಪೇಟೆ ಸಾಯಿ ಶಂಕರ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾಶ್ರಯ ಪಡೆದಿರುವ 113 ಮಕ್ಕಳ ಪೈಕಿ 3ನೇ ತರಗತಿಯಿಂದ ಪಿ.ಯು.ಸಿ ವರೆಗಿನ 66 ವಿದ್ಯಾರ್ಥಿಗಳು ಯಾರ ನಿರ್ದೇಶನ ಹಾಗೂ ತರಬೇತಿ ಇಲ್ಲದೇ ತಾವೇ ಸ್ವತಃ ಒಂದೇ ದಿನದಲ್ಲಿ ಕಲಿತು ನೀಡಿದ ಸಾಂಸ್ಕೃತಿಕ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸಾಯಿ ಶಂಕರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಸಂಭ್ರಮ ಪೆÇಮ್ಮಕ್ಕಡ ಸಂಸ್ಥೆಯ ಉಪಾಧ್ಯಕ್ಷೆ ಚಂಗುಲಂಡ ಅಶ್ವಿನಿ ಸತೀಶ್ ಸ್ವಾಗತಿಸಿ, ಕೊಡವ ಸಮಾಜದ ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಸ್ವಾಗತಿಸಿ ವಂದಿಸಿದರು.