ಚೆಟ್ಟಳ್ಳಿ, ಅ. 26: ಪೊನ್ನಂಪೇಟೆ ಸಂತ ಅಂತೋಣಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಾಲಕರ ಹಾಕಿ ತಂಡ ಮಡಿಕೇರಿಯಲ್ಲಿ ನಡೆದ ವಿಭಾಗ ಮಟ್ಟದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ರಾಜ್ಯಮಟಕ್ಕೆ ಆಯ್ಕೆಯಾಗಿದೆ.

ವಿಭಾಗ ಮಟ್ಟದಲ್ಲಿ ಹಾಸನದ ವಿರುದ್ಧ 8-0 ಗೋಲುಗಳಿಂದ ಹಾಗೂ ಮೈಸೂರು ತಂಡದ ವಿರುದ್ಧ 7-1 ಗೋಲುಗಳ ಅಂತರದಲ್ಲಿ ವಿಜಯ ಸಾಧಿಸಿ ಮಡಿಕೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಪಂದ್ಯಾಟ ತಾ. 24 ಕ್ಕೆ ಆರಂಭಗೊಂಡಿದ್ದು, ತಾ. 27 ರವರೆಗೆ ನಡೆಯಲಿದೆ. ಮೈಸೂರು ತಂಡದ ವಿರುದ್ಧ ಬಿಪಿನ್-4, ಮೋಕ್ಷಿತ್-1, ಶಶಾಂಕ್-1, ಆರ್ಯನ್-1 ಗೋಲುಗಳಿಸಿದ್ದಾರೆ.