ಮಡಿಕೇರಿ, ಅ. 26: ಕೊಡಗು ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಂತೆ ಕಾರ್ಯನಿರ್ವಹಿಸುವ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘವು ಮಡಿಕೇರಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದರ ಪ್ರಥಮ ಸಭೆಯು ಸಂಘದ ಮುಖ್ಯ ಪ್ರವರ್ತಕ ಸಿರಿಲ್ ಮೊರಾಸ್ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಸಂತ ಮೈಕಲರ ವಿದ್ಯಾಸಂಸ್ಥೆಗಳ ಸಂಚಾಲಕ ರೆ.ಫಾ. ನವೀನ್‍ಕುಮಾರ್ ಉದ್ಘಾಟಿಸಿ ಸಂಘಕ್ಕೆ ಶುಭ ಕೋರಿದರು. ಸಂಘದ ಮುಂದಿನ ವರ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ಸಿರಿಲ್ ಮೊರಾಸ್ ಸಭೆಯ ಗಮನ ಸೆಳೆದರು.
ಸಂಘದ ಪ್ರಮುಖರಾದ ಎನ್.ಟಿ. ಜೋಸೆಫ್, ಸುನಿಲ್ ಲೋಬೋ, ಕ್ಲೆಮೆಂಟ್ ರೇಗೋ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಬೆನೆಡಿಕ್ಟ್ ಸಲ್ಡಾನ್ಹ ಪ್ರಾರ್ಥನೆ, ಸಾರ್ಜೆಂಟ್ ಇಮ್ಯಾನುಯೆಲ್ ಸ್ವಾಗತಿಸಿ, ಎಸ್.ಎಂ. ಡಿಸಿಲ್ವಾ ವಂದಿಸಿದರು.