*ಸಿದ್ದಾಪುರ, ಅ. 25: ಸಿದ್ದಾಪುರ ಶ್ರೀದುರ್ಗಾ ಭಗವತಿ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಅಂಗವಾಗಿ ತಾ. 27 ರಿಂದ 30 ರವರೆಗೆ ಬ್ರಹ್ಮಶ್ರೀ ಈ.ಸಿ. ಕುಟೀರನ್ ನಂಬೂದರಿಪಾಡ್ ತಂತ್ರಿಗಳು ರಾಜರಾಜೇಶ್ವರಿ ದೇವಸ್ಥಾನ ತಳಿಪರಂಬು ಇವರ ನೇತೃತ್ವದಲ್ಲಿ ದೇವತಾ ಪ್ರತಿಷ್ಠಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾ. 28 ರಂದು ಬೆಳಿಗ್ಗೆ ಗಣಪತಿ ಹೋಮ ವಿಶೇಷಪೂಜೆ ಪ್ರಸಾದ ವಿನಿಯೋಗ ಸಂಜೆ 3.30 ಗಂಟೆಗೆ ವಿವಿಧ ಹೋಮಪೂಜೆ ನಡೆಯಲಿದೆ. ತಾ. 30 ರಂದು ಬೆಳಿಗ್ಗೆ 7.15 ರಿಂದ 9.15 ರವರೆಗೆ ಪ್ರತಿಷ್ಠಾಪನೆ ನಡೆಯಲಿದೆ.