ಸಿದ್ದಾಪುರ, ಅ. 25: ಇಲ್ಲಿಗೆ ಸಮೀಪದ ಅರೆಕಾಡು ಗ್ರಾಮದ ಬಳಂಜಿಕೆರೆಯ ಚಾಮುಂಡೇಶ್ವರಿ (ಐದ್ರೋಡಮ್ಮ) ದೇವಾಲಯದ ವಾರ್ಷಿಕ ಉತ್ಸವ ಹಾಗೂ ದೀಪಾವಳಿ ಹಬ್ಬ ಆಚರಣೆ ತಾ. 27 ರ ಸಂಜೆ 6 ರಿಂದ ತಾ. 28 ರವರೆಗೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ತಾ. 28 ರಂದು ಬೆಳಿಗ್ಗೆ 7.30 ಗಂಟೆಗೆ ಕೆ.ಟಿ. ಅಂಗಡಿಯಿಂದ ಕಲಶ ಮೆರವಣಿಗೆಯು ದೇವಸ್ಥಾನದವರೆಗೆ ಸಾಗಲಿದೆ. 9 ರಿಂದ 12 ರವರೆಗೆ ಮಹಾ ಪೂಜೆ, ತೀರ್ಥ ಪ್ರಸಾದ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.