ಕೂಡಿಗೆ, ಅ. 25: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಸರಕಾರಿ ಪ್ರೌಢಶಾಲೆಯಲ್ಲಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಜಾಗೃತಿ ಆಂದೋಲನ ನಡೆಯಿತು. ಆಂದೋಲನದ ಸವಿಸ್ತಾರವಾದ ವಿಷಯದ ಬಗ್ಗೆ ಮಾಹಿತಿಯನ್ನು ಟಿ.ಜಿ. ಪ್ರೇಮಕುಮಾರ್ ನೀಡಿದರು. ಈ ಸಂದರ್ಭ ಶಾಲಾ ವಿದ್ಯಾರ್ಥಿಗಳಿಂದ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಭಿತ್ತಿಪತ್ರಗಳನ್ನು ಹಂಚಿ ದೀಪಾವಳಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು.