ಮಡಿಕೇರಿ, ಅ. 24: ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಇಬ್ನಿವಳವಾಡಿ, ಬೋಯಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿರುವ ರಾಜ್ಯಮಟ್ಟದ ಬಾಲಕ-ಬಾಲಕಿಯರ ಹಾಕಿ ಪಂದ್ಯಾವಳಿ ಇಂದಿನಿಂದ ಆರಂಬಗೊಂಡಿದೆ. ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಸಾಯಿ ಟರ್ಫ್ ಮೈದಾನದಲ್ಲಿಂದು ಮಡಿಕೇರಿ, ಅ. 24: ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಇಬ್ನಿವಳವಾಡಿ, ಬೋಯಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿರುವ ರಾಜ್ಯಮಟ್ಟದ ಬಾಲಕ-ಬಾಲಕಿಯರ ಹಾಕಿ ಪಂದ್ಯಾವಳಿ ಇಂದಿನಿಂದ ಆರಂಬಗೊಂಡಿದೆ. ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಸಾಯಿ ಟರ್ಫ್ ಮೈದಾನದಲ್ಲಿಂದು ಮೈಸೂರು ತಂಡ ಬೆಂಗಳೂರು ತಂಡವನ್ನು 7-1 ಗೋಲುಗಳಿಂದ ಸೋಲಿಸಿತು. ಮೈಸೂರು ತಂಡದ ಗೌರವ್ 3 ಗೋಲು ಬಾರಿಸಿದರು. ಬೆಂಗಳೂರು ಹೈಸ್ಕೂಲ್ ತಂಡ ಬೆಂಗಳೂರು
(ಮೊದಲ ಪುಟದಿಂದ) ತಂಡವನ್ನು 4-2 ಗೋಲಿನಿಂದ ಸೋಲಿಸಿತು.
ಕೂಡಿಗೆ ತಂಡವು ಕಲಬುರ್ಗಿ ತಂಡವನ್ನು 5-0 ಗೋಲಿನಿಂದ ಮಣಿಸಿತು. ಕೂಡಿಗೆಯ ರಾಹುಲ್ 4 ಗೋಲು ಬಾರಿಸಿದರು. ಮೈಸೂರು ತಂಡ ಬೆಳಗಾವಿ ತಂಡವನ್ನು ಭರ್ಜರಿ 14-0 ಗೋಲುಗಳ ಅಂತರದಿಂದ ಸೋಲಿಸಿತು. ಮೈಸೂರಿನ ಬಿಪಿನ್ 4, ಗೌರವ್ 5 ಗೋಲು ಬಾರಿಸಿ ಗಮನ ಸೆಳೆದರು.
ಬಾಲಕಿಯರ ವಿಭಾಗದಲ್ಲಿ ಕಲಬುರ್ಗಿ ತಂಡ ಬೆಂಗಳೂರು ತಂಡವನ್ನು 5-1 ಗೋಲಿನಿಂದ ಸೋಲಿಸಿತು. ಕೂಡಿಗೆ ತಂಡ ಬೆಳಗಾವಿ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ಮೈಸೂರು ತಂಡ ಬೆಂಗಳೂರು ತಂಡವನ್ನು ಭರ್ಜರಿ 13-0 ಗೋಲುಗಳಿಂದ ಸೋಲಿಸಿತು. ಮೈಸೂರು ತಂಡದ ದೇಚಮ್ಮ 4, ಸೀಮಾ 3 ಗೋಲು ಬಾರಿಸಿ ಗಮನ ಸೆಳೆದರು.
ಕಲಬುರ್ಗಿ ತಂಡ ಬೆಂಗಳೂರು ತಂಡವನ್ನು 5-1 ಗೋಲಿನಿಂದ ಸೋಲಿಸಿತು. ಮೈಸೂರು ತಂಡ ಬೆಳಗಾವಿ ತಂಡವನ್ನು 8-0 ಗೋಲುಗಳಿಂದ ಸೋಲಿಸಿ ಮುನ್ನಡೆಯಿತು. ಮೈಸೂರು ತಂಡದ ಜೀವಿತಾ 3 ಗೋಲು ಬಾರಿಸಿ ಗಮನ ಸೆಳೆದರು.