ಮಡಿಕೇರಿ, ಅ. 24: ಕೊಡವ ಜನಾಂಗದವರು ಬಹುತೇಕ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಸೇರಿದವ ರಾಗಿದ್ದು, ಆಯಾ ಕುಟುಂಬಗಳು ನೆಲೆಕಂಡುಕೊಂಡಿರುವ ಸ್ಥಳಗಳಲ್ಲಿ ವಾಸಿಸುವವರಾಗಿದ್ದಾರೆ. ಈ ಸನ್ನಿವೇಶದ ನಡುವೆ ಉದ್ಯೋಗ, ಶಿಕ್ಷಣ ಸೇರಿದಂತೆ ಮತ್ತಿತರ ಕೆಲವೊಂದು ಕಾರಣಗಳಿಂದಾಗಿ ಕೆಲವಾರು ಮಂದಿ ನಗರ, ಪಟ್ಟಣಗಳಲ್ಲಿ ನೆಲೆನಿಂತು ತಮ್ಮ ಜೀವನ ನಿರ್ವಹಿಸುತ್ತಿದ್ದಾರೆ. ಅವರವರ ಊರುಗಳಲ್ಲಾದರೆ ಪರಸ್ಪರ ಕಷ್ಟ-ಸುಖಗಳಿಗೆ ಸಭೆ-ಸಮಾರಂಭಗಳಿಗೆ ಸ್ಥಳೀಯ ಕುಟುಂಬದವರು, ನೆರೆಕರೆಯವರ ಸಹಕಾರ ಇದ್ದೇ ಇರುತ್ತದೆ.ಆದರೆ ನಗರ ಪ್ರದೇಶಗಳಲ್ಲಿ ಈ ರೀತಿಯ ಸಹಕಾರ ಸಿಗುವದು ಕಡಿಮೆ ಇರುತ್ತಿತ್ತು. ಇಂತಹ ಕಾರಣಗಳಿಂದಾಗಿ ಹಲವು ವರ್ಷಗಳ ಹಿಂದೆ ಕೆಲವು ಹಿರಿಯರು, ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಆಯಾ ವ್ಯಾಪ್ತಿಯ ಜನರನ್ನು ಸೇರಿಸಿಕೊಂಡು ಸಂಘಗಳನ್ನು ರಚಿಸಿದ್ದಾರೆ. ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರದಲ್ಲಿಯೂ ಕೊಡವ ಕೇರಿ ಎಂಬ ಚಿಂತನೆಯೊಂದಿಗೆ ಸಂಘದ ರೀತಿಯ ವ್ಯವಸ್ಥೆಯನ್ನು ಹುಟ್ಟು ಹಾಕಲಾಗಿದೆ. ಒಂದು ನಿರ್ದಿಷ್ಟ ವ್ಯಾಪ್ತಿಗೆ ಒಳಪಟ್ಟಂತೆ ಅಲ್ಲಿ ನೆಲೆಸಿರುವ ಕೊಡವ ಜನಾಂಗದವರನ್ನು ಇದಕ್ಕೆ ಸೇರುವಂತೆ ಪ್ರೇರೇಪಿಸಿ ಅಗತ್ಯಾನುಸಾರ ಅವರವರ ಕಷ್ಟ-ಸುಖ, ತುರ್ತು ಸಂದರ್ಭಗಳಿಗೆ ನೆರವಾಗುವದು, ಹುಟ್ಟು-ಸಾವಿನ ಸಂದರ್ಭಗಳ ಪದ್ಧತಿ-ಪರಂಪರೆಗೆ ಸಹಕಾರ ನೀಡಿ ಭಾಗಿಗಳಾಗುವ ಮೂಲಕ ಈ ಕೇರಿಯ ಚಿಂತನೆ ಯಶಸ್ಸು ಕಂಡಿದೆ.

ಪ್ರಸ್ತುತ ಬೆಂಗಳೂರು, ಮೈಸೂರು ಸೇರಿದಂತೆ ಮಡಿಕೇರಿ, ವೀರಾಜಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ ಯಂತಹ ಪ್ರದೇಶಗಳಲ್ಲೂ ಈ ರೀತಿಯ ಸಂಘಗಳು, ಕೊಡವ ಕೇರಿಗಳು ರಚನೆಗೊಂಡಿವೆ. ಕಳೆದ 27 ವರ್ಷಗಳ

(ಮೊದಲ ಪುಟದಿಂದ) ಹಿಂದೆ (1992ರ ಡಿಸೆಂಬರ್ 25) ಅರಮಣಮಾಡ ರವಿ ಉತ್ತಯ್ಯ, ಕಲಿಯಂಡ ಚಂಗಪ್ಪ, ಬಲ್ಯಾಟಂಡ ಪಾರ್ಥ ಚಂಗಪ್ಪ, ಮೇದುರ ರವಿ, ಬಾಳೆಯಡ ಚರ್ಮಣ, ಅಳಮಂಡ ಚಂಗಪ್ಪ ಮತ್ತಿತರ ಸಮಾನಮನಸ್ಕರು ಸೇರಿ ಪ್ರಪ್ರಥಮವಾಗಿ ಮಡಿಕೇರಿಯಲ್ಲಿ ಕಾವೇರಿ ಕೊಡವ ಕೇರಿಯನ್ನು ಅಸ್ತಿತ್ವಕ್ಕೆ ತಂದರು.

ಈ ಕೇರಿಯ ಕಾರ್ಯ ಚಟುವಟಿಕೆಯಿಂದ ಪ್ರೇರೇಪಿತ ಗೊಂಡು ಬಳಿಕ ದೇಚೂರು ಕೊಡವ ಕೇರಿ, ಭಗಂಡೇಶ್ವರ, ಸುದರ್ಶನ, ಮುತ್ತಪ್ಪ ವಿನಾಯಕ, ಇಗ್ಗುತಪ್ಪ, ಸುಬ್ರಹ್ಮಣ್ಯ, ಫೀ.ಮಾ. ಕಾರ್ಯಪ್ಪ, ಗಣಪತಿ, ರಾಣಿಪೇಟೆ, ಭಗವತಿ ಕೊಡವ ಕೇರಿ ಎಂಬ ಹೆಸರಿನಲ್ಲಿ ಮಡಿಕೇರಿ ನಗರ ವ್ಯಾಪ್ತಿಯೊಳಗೆ ಒಟ್ಟು 12 ಕೊಡವ ಕೇರಿಗಳು ಸ್ಥಾಪನೆ ಗೊಂಡಿವೆ. ಬೆಂಗಳೂರು ನಗರದಲ್ಲಿ ಸುಮಾರು 35 ವಿವಿಧ ಸಂಘಗಳು ಈ ರೀತಿಯಾಗಿ ಕ್ರಿಯಾಶೀಲವಾಗಿವೆ.

ಈ ಎಲ್ಲಾ ಕೇರಿಗಳಲ್ಲಿ ವಿವಿಧ ಕಾರ್ಯಚಟುವಟಿಕೆಯೊಂದಿಗೆ ತುರ್ತು ಸಂದರ್ಭಗಳಲ್ಲಿ ಪರಸ್ಪರ ನೆರವಾಗುವದು, ಸಂಸ್ಕøತಿಯ ಪರಿಪಾಲನೆಯೊಂದಿಗೆ ಜನಾಂಗದ ವಿವಿಧ ಹಬ್ಬ-ಹರಿದಿನಗಳನ್ನು ಆಚರಿಸಲಾಗುತ್ತಿದೆ.

ಅಂತರಕೇರಿ ಮೇಳ

ಇದರ ನಡುವೆ ಎಲ್ಲಾ ಕೇರಿಗಳನ್ನು ಸೇರಿಸಿ ಪರಸ್ಪರ ಬಾಂಧವ್ಯ ವೃದ್ಧಿ, ಸಾಮರಸ್ಯದ ಪರಿಕಲ್ಪನೆಯೊಂದಿಗೆ ಮತ್ತೊಂದು ಹೆಜ್ಜೆಯಾಗಿ ಹಲವು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಅಂತರ ಕೊಡವ ಕೇರಿ ಮೇಳ ಎಂಬ ಕಾರ್ಯಕ್ರಮವನ್ನು ಪ್ರಾರಂಭಿ¸ Àಲಾಗಿದೆ. ಈ ಮೇಳದಲ್ಲಿ ವಿವಿಧ ಜನಪದೀಯ ಸ್ಪರ್ಧೆಗಳು, ಸಾಂಸ್ಕøತಿಕ ಸ್ಪರ್ಧೆಗಳನ್ನು ವಿವಿಧ ಕೇರಿಗಳ ನಡುವೆ ಆಯೋಜಿಸಲಾಗುತ್ತಿದೆ. ಇದು ಪರಸ್ಪರ ಬಾಂಧವ್ಯ ವೃದ್ಧಿ, ಆಚಾರ-ವಿಚಾರಗಳ ಪರಿಪಾಲನೆಗೂ ನೆರವಾಗುತ್ತಿದೆ.

ತಾ. 29 ರಂದು 6ನೇ ಕೇರಿ ಮೇಳ

ಕೇರಿ ಮೇಳ ಚಿಂತನೆಯ ಬಳಿಕ ಆರಂಭದಲ್ಲಿ ನಾಲ್ಕು ವರ್ಷಗಳ ಕಾಲ ಸತತ ವರ್ಷಗಳಲ್ಲಿ ಈ ಮೇಳವನ್ನು ನಡೆಸಲಾಗಿದ್ದು, ಬಳಿಕ ಮೂರು ವರ್ಷಕ್ಕೊಮ್ಮೆ ನಡೆಸಲು ತೀರ್ಮಾನಿಸಲಾಗಿದೆ. ವರ್ಷಂಪ್ರತಿ ಒಂದೊಂದು ಕೇರಿ ಈ ಮೇಳದ ಮುಂದಾಳತ್ವವನ್ನು ವಹಿಸುತ್ತಿದೆ. ಈ ತನಕ ಕಾವೇರಿ ಕೇರಿ, ದೇಚೂರು ಕೇರಿ, ಸುದರ್ಶನಕೇರಿ, ವಿನಾಯಕ ಕೇರಿ ಹಾಗೂ ಭಗಂಡೇಶ್ವರ ಕೇರಿಗಳು ಈ ಮೇಳದ ಮುಂದಾಳತ್ವ ವಹಿಸಿವೆ. ಇದೀಗ 6ನೇ ಅಂತರ ಕೇರಿ ಮೇಳ ಮುತ್ತಪ್ಪ ಕೇರಿಯ ಉಸ್ತುವಾರಿಯಲ್ಲಿ ತಾ. 29 ರಂದು ಮಡಿಕೇರಿಯ ಕೊಡವ ಸಮಾಜದಲ್ಲಿ ಆಯೋಜಿತವಾಗಿದೆ.

ಜಿಲ್ಲೆಯ ಬೇರೆ ಬೇರೆ ಊರುಗಳಿಂದ ಆಗಮಿಸಿ ನಗರದಲ್ಲಿ ವಾಸವಿರುವ ಜನಾಂಗದ ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯ ಕೇರಿಗಳ ಮೂಲಕ ಬೊಳಕಾಟ್, ಕೋಲಾಟ್, ಉಮ್ಮತ್ತಾಟ್, ಕಪ್ಪೆಯಾಟ್ ಮತ್ತಿತರ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದು, ಈಗಾಗಲೇ ಮುತ್ತಪ್ಪ ಕೇರಿಯ ನೇತೃತ್ವದಲ್ಲಿ ಇನ್ನಿತರ ಕೇರಿಗಳ ಪ್ರಮುಖರನ್ನು ಒಳಗೊಂಡಂತೆ ಹಲವು ಪೂರ್ವ ಸಿದ್ಧತಾ ಸಭೆಗಳು ನಡೆದಿವೆ.

ವಿವಿಧ ಕೇರಿಗಳಲ್ಲಿ ಮೇಳದಲ್ಲಿನ ಸ್ಪರ್ಧೆಗಳಿಗಾಗಿ ಮಳೆಯ ವಾತಾವರಣದ ನಡುವೆಯೂ ತಾಲೀಮು ನಡೆಸುತ್ತಿರುವದು ಕಂಡುಬಂದಿದೆ.

-ಶಶಿ ಸೋಮಯ್ಯಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮೇಳದ ಆತಿಥ್ಯ ವಹಿಸಿರುವ ಶ್ರೀಮುತ್ತಪ್ಪ ಕೊಡವ ಕೇರಿಯ ಅಧ್ಯಕ್ಷ ಹಾಗೂ ಮೇಳದ ಅಧ್ಯಕ್ಷ ಮುಂಡಂಡ ಕೆ. ಗಾಂಧಿ ಅವರು, ಅಂದು ಪೂರ್ವಾಹ್ನ 9 ಗಂಟೆಯಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6 ಗಂಟೆಯಿಂದ ಕೊಡವ ರಸಮಂಜರಿ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

ತಾ. 29 ರ ಪೂರ್ವಾಹ್ನ 9 ಗಂಟೆಗೆ ಹಿರಿಯ ಸದಸ್ಯ ಚೆಟ್ರಂಡ ಸೋಮಯ್ಯ ಅವರು, ಕಾರ್ಯ ಕ್ರಮಗಳಿಗೆ ಚಾಲನೆ ನೀಡಲಿದ್ದು, ಮೇಳದಲ್ಲಿ ಪುರುಷರಿಗೆ ಬೊಳಕಾಟ್, ಕೋಲಾಟ್, ಪರೆಯಕಳಿ, ಬಾಳೋಪಾಟ್, ಮಹಿಳೆಯರಿಗೆ ಉಮ್ಮತ್ತಾಟ್, ಮಕ್ಕಳಿಗೆ ಕಪ್ಪೆಯಾಟ್, ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ವಾಲಗತಾಟ್, ಸಮ್ಮಂದ ಅಡ್‍ಕ್‍ವೊ, ಕೊಡವ ಪಾಟ್ ಸ್ಪರ್ಧೆಗಳು ನಡೆಯಲಿವೆ.

ತಂಡದ ಸ್ಪರ್ಧೆಗಳಲ್ಲಿ 8 ರಿಂದ 12 ಮಂದಿ ಭಾಗವಹಿಸಲು ಅವಕಾಶವಿದ್ದು, ಕೊಡವ ಪಾಟ್ ಸ್ಪರ್ಧೆಯಲ್ಲಿ ಒಂದು ಕೇರಿಯಿಂದ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆಯೆಂದು ತಿಳಿಸಿದ ಅವರು, ಈಗಾಗಲೆ ಹಲವು ಕೇರಿಗಳವರು ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಿದ್ದು, ಇನ್ನುಳಿದವರು ಆದಷ್ಟು ಶೀಘ್ರ ನೋಂದಾಯಿಸಿ ಕೊಳ್ಳುವಂತೆ ಮನವಿ ಮಾಡಿದರು.

ಮೇಳದಂದು ವಿವಿಧ ರೀತಿಯ ತಿಂಡಿ, ಉಪ್ಪಿನ ಕಾಯಿ, ಪಲ್ಯ, ಬಜ್ಜಿ, ಜಾಮ್, ವೈನ್ ಮುಂತಾದ ಮನೆಯಲ್ಲೆ ತಯಾರಿಸಿದ ಖಾದ್ಯ ಪದಾರ್ಥಗಳನ್ನು ಸಮಾಜಕ್ಕೆ ತಂದು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಬಹುದಾಗಿದ್ದು, ಮಹಿಳೆಯರು ಈ ಬಗ್ಗೆ ಸಂಬಂಧಿಸಿದವರಿಂದ ಮಾಹಿತಿ ಪಡೆಯಬಹುದು ಎಂದರು.

ಅಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ, ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಮಂಡೇಪಂಡ ಸುನಿಲ್ ಸುಬ್ರಮಣಿ ಹಾಗೂ ಶಾಂತೆಯಂಡ ವೀಣಾ ಅಚ್ಚಯ್ಯ ಅವರುಗಳು ಭಾಗವಹಿಸಲಿದ್ದು, ಕೇರಿಯ ಹಿರಿಯರಾದ ಚೆಟ್ರಂಡ ಸೋಮಯ್ಯ ಹಾಗೂ ಉದಿಯಂಡ ಮುತ್ತಮ್ಮ ದೇವಯ್ಯ ಅವರುಗಳನ್ನು ಸನ್ಮಾನಿಸಲಾಗುವದು ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಮುತ್ತಪ್ಪ ಕೊಡವ ಕೇರಿಯ ಉಪಾಧ್ಯಕ್ಷ ಶಾಂತೆಯಂಡ ಸನ್ನಿ ಪೂವಯ್ಯ, ಖಜಾಂಚಿ ಅಲ್ಲಾರಂಡ ರವಿ ಅಯ್ಯಪ್ಪ, ಗೌರವ ಕಾರ್ಯದರ್ಶಿ ಕನ್ನಂಡ ಸುಧಾ ಬೊಳ್ಳಪ್ಪ ಹಾಗೂ ಮೇಳದ ಸಾಂಸ್ಕøತಿಕ ಸಮಿತಿ ಅಧ್ಯಕ್ಷರಾದ ಕನ್ನಂಡ ಕವಿತ ಉಪಸ್ಥಿತರಿದ್ದರು.