ಮಡಿಕೇರಿ, ಅ. 24: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದ ಪ್ರಚಾರ ಸಭೆ ಮತ್ತು ಪೋಸ್ಟರ್ ಬಿಡುಗಡೆ ದುಬೈನಲ್ಲಿ ನಡೆಯಿತು.
ಸ್ವಾಗತ ಸಮಿತಿ ಚೇರ್ಮನ್ ಅಹ್ಮದ್ ಚಾಮಿಯಾಲ್ ರವರು ವೆಲ್ಫೇರ್ ಗಲ್ಫ್ ಸಮಿತಿ ಅಧ್ಯಕ್ಷ ಉಸ್ಮಾನ್ ಹಾಜಿ ನಾಪೋಕ್ಲು ಹಾಗೂ ಹಿರಿಯ ನಾಯಕರಾದ ಹಮೀದ್ ನಾಪೋಕ್ಲು ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ವೆಲ್ಫೇರ್ ಯುಎಇ ಸಮಿತಿ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು, ಸ್ವಾಗತ ಸಮಿತಿ ಕೋಶಾಧಿಕಾರಿ ಅರಾಫತ್ ನಾಪೋಕ್ಲು, ಕನ್ವಿನರ್ ರಿಯಾಝ್ ಕೊಂಡಂಗೇರಿ, ಶಾಹುಲ್ ಹಮೀದ್ ಸಖಾಫಿ ಮಾದಾಪುರ, ನಾಸರ್ ನಈಮಿ ಕೊಳಕೇರಿ, ಹಂಝ ಪೊನ್ನಂಪೇಟೆ, ಇಬ್ರಾಹಿಂ ನಾಪೋಕ್ಲು, ಇರ್ಷಾದ್ ಕೊಂಡಂಗೇರಿ, ಮುಜೀಬ್ ಕಡಂಗ, ಹಾರಿಸ್ ಕುಂಜಿಲ, ಸಲೀಂ ಗುಂಡಿಗೆರೆ ಸೇರಿದಂತೆ ಸಮಿತಿಯ ಪ್ರಮುಖ ನಾಯಕರುಗಳು ಈ ಸಂದರ್ಭ ಉಪಸ್ಥಿತರಿದ್ದರು.