ಸೋಮವಾರಪೇಟೆ, ಅ. 24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನದಲ್ಲಿ ಶಾಂತಳ್ಳಿ ಕುಮಾರಲಿಂಗೇಶ್ವರ ಸಭಾಂಗಣದಲ್ಲಿ ಕಾಫಿ ತೋಟದಲ್ಲಿ ಗೊಬ್ಬರ ನಿರ್ವಹಣೆ ಹಾಗೂ ಮಣ್ಣು ಪರೀಕ್ಷೆ, ಗಿಡ ಕಸಿ ಮಾಡುವ ವಿಧಾನದ ಬಗ್ಗೆ ವಿಚಾರ ಸಂಕಿರಣ ನಡೆಯಿತು.
ಕಾರ್ಯಕ್ರಮವನ್ನು ಶಾಂತಳ್ಳಿ ಗ್ರಾಮದ ಕೃಷಿಕ ಪ್ರವೀಣ್ ಉದ್ಘಾಟಿಸಿದರು. ಕಾಫಿ ಉಪಸಂಶೋಧನಾ ಕೇಂದ್ರದ ಸಹಾಯಕ ಉಪ ನಿರ್ದೇಶಕ ಡಾ. ಶಿವಪ್ರಸಾದ್ ಮಣ್ಣು ಪರೀಕ್ಷೆ ಮತ್ತು ಗೊಬ್ಬರ ನಿರ್ವಹಣೆಯ ಮಾಹಿತಿ ನೀಡಿದರು. ಡಾ. ರಂಜಿತ್ಕುಮಾರ್ ಕಾಫಿಯಲ್ಲಿ ಕೀಟಗಳು ಹಾಗೂ ಅದರ ನಿಯಂತ್ರಣ, ಗಿಡಗಳಿಗೆ ಕಸಿ ಮಾಡುವ ವಿಧಾನದ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ಮಾಹಿತಿ ನೀಡಿದರು.
ಕೃಷಿ ಮೇಲ್ವಿಚಾರಕಿ ಗೀತ, ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಹಾಗೂ ಮೇಲ್ವಿಚಾರಕರು ಉಪಸ್ಥಿತರಿದ್ದರು. ಹಲವು ರೈತರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.